ಪತ್ನಿ ನೇಣು ಬಿಗಿ ಸ್ಥಿತಿಯಲ್ಲಿ ಶವವಾಗಿ ಪತ್ತೆ: ಹೆದರಿ ಗಂಡನೂ ಆತ್ಮಹತ್ಯೆಗೆ ಶರಣು ಮಂಡ್ಯ,ಆಗಸ್ಟ್,21,2024 (..): ಗಂಡನ ಮನೆಯಲ್ಲಿ ಪತ್ನಿ ಅನುಮಾನಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪತ್ನಿ ಸಾವಿನಿಂದ ಹೆದರಿದ ಪತಿಯೂ ಸಹ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲ್ಲೂಕಿನ ಮಂದಗೆರೆ ಗ್ರಾಮದಲ್ಲಿ ನಡೆದಿದೆ. ಸ್ವಾತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪತಿ ಮೋಹನ್ (26) ಇಂದು ಬೆಳಿಗ್ಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಿನ್ನೆ ರಾತ್ರಿ ಪತ್ನಿ ಸ್ವಾತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು ಘಟನೆ ಬಳಿಕ ಗಂಡ ಮತ್ತು ಆತನ ಪೋಷಕರು ನಾಪತ್ತೆಯಾಗಿದ್ದರು. ಬಳಿಕ ಇಂದು ಬೆಳಿಗ್ಗೆ ಪತಿ ಮೋಹನ್ ಸಹ ಬಾವಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ಇನ್ನು ಮೋಹನ್ ಮತ್ತು ಪೋಷಕರೇ ಸ್ವಾತಿಯನ್ನ ಕೊಲೆ ಮಾಡಿದ್ದಾರೆಂದು ಮೃತ ಗೃಹಿಣಿ ಸ್ವಾತಿ ಸಂಬಂಧಿಕರು ಆರೋಪಿಸಿದ್ದು, ಪತಿ ಮೋಹನ್ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. : , , ,