ಜೆಡಿಎಸ್ ಗೆ ತತ್ವ ಸಿದ್ಧಾಂತ ಇಲ್ಲ ಎಂದಿದ್ದ ಸಿದ್ಧರಾಮಯ್ಯಗೆ ತಿರುಗೇಟು ಕೊಟ್ಟ ಹೆಚ್.ಡಿಕೆ. ಚಾಮರಾಜನಗರ,ಮೇ,5,6,2023(..):ಜೆಡಿಎಸ್ ಗೆ ತತ್ವ ಸಿದ್ಧಾಂತವಿಲ್ಲ ಎಂದು ಟೀಕಿಸಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಚಾಮರಾಜನಗರ ಹನೂರಿನಲ್ಲಿ ಇಂಧು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಿದ‍್ಧರಾಮಯ್ಯರದ್ದು ಅಡ್ಜೆಸ್ಟ್ ಮೆಂಟ್ ರಾಜಕಾರಣ. ಇದೇ ವಿಚಾರವಾಗಿ ನಾಗಮಂಗಲದಲ್ಲಿ ಪಶ್ಚಾತ್ತಾಪ ಪಟ್ಟಿಲ್ಲವೇ..? ಮಂಡ್ಯದಲ್ಲಿ ಸುಮಲತಾ ಗೆಲ್ಲಿಸಿ ತಪ್ಪು ಮಾಡಿದ್ವಿ ಅಂತಾರೆ. ಅಡ್ಜೆಸ್ಟ್ ಮೆಂಟ್ ರಾಜಕಾರಣ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ..? ಎಂದು ಕಿಡಿಕಾರಿದರು. ಸಿದ್ದರಾಮಯ್ಯಗೆ ತತ್ವ ಸಿದ್ಧಾಂತ ಇಲ್ಲ. ಲಿಂಗಾಯತ ಸಮಾಜದ ಬಗ್ಗೆ ಮಾತಾನಾಡಿ ಈಗ ಕ್ಷಮಿಸಿ ಅಂತಿದ್ದಾರೆ. ಹೆಚ್.ಡಿ ದೇವೇಗೌಡರು ಕೊಟ್ಟ ಕೊಡುಗೆಯನ್ನ ಇವರು ಕೊಡೋಕೆ ಆಗುತ್ತಾ..? 5 ವರ್ಷ ಸಿಎಂ ಆಗಿದ್ದಾಗ ಎಷ್ಟು ಜನರನ್ನ ಬೆಳೆಸಿದ್ದಾರೆ ಹೇಳಲಿ. ಸಿದ್ದರಾಮಯ್ಯರಿಂದ ನಾನು ತತ್ವ ಸಿದ್ದಾಂತ ಕಲಿಯಬೇಕಿಲ್ಲ ಎಂದು ಟಾಂಗ್ ನೀಡಿದರು. : – – - .