ಭಾನುವಾರ ನೀಟ್ ಪರೀಕ್ಷೆ: ಮಕ್ಕಳ ಭವಿಷ್ಯ ಮುಖ್ಯವಾದ್ರೆ ರೋಡ್ ಶೋ ನಿಲ್ಲಿಸಲಿ- ಬಿಜೆಪಿಗೆ ಹೆಚ್.ಡಿಕೆ ಆಗ್ರಹ.. ಬೆಂಗಳೂರು,ಮೇ,5,2023(..):ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ನಾಳೆ ಮತ್ತು ಭಾನುವಾರ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಹಮ್ಮಿಕೊಂಡಿದ್ದು ಭಾನುವಾರವೇ ನೀಟ್ ಪರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ರೋಡ್ ಶೋ ರದ್ದು ಮಾಡುವಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಭಾನುವಾರ ನೀಟ್ ಪರೀಕ್ಷೆ ಇದೆ. ಹೀಗಾಗಿ ಬಿಜೆಪಿಯವರು ರೋಡ್ ಶೋ ನಿಲ್ಲಿಸಲಿ. ಮಕ್ಕಳ ಭವಿಷ್ಯ ಮುಖ್ಯವಾದರೆ ರೋಡ್ ಶೋ ನಿಲ್ಲಿಸಲಿ. ಬಿಜೆಪಿಗೆ ಸಮಸ್ಯೆಗಿಂತ ಅಧಿಕಾರ ಹಿಡಿಯುವುದೇ ಮುಖ್ಯ . ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂದರೆ ರೋಡ್ ಶೋ ನಿಲ್ಲಿಸಬೇಕು ಎಂದು ಸಲಹೆ ನೀಡಿದರು. : - – - – –