ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ವಿಚಾರ: ‘ಕೈ’ ನಾಯಕರಿಗೆ ಟಾಂಗ್ ನೀಡಿದ ಸಚಿವ ವಿ.ಸೋಮಣ್ಣ ಚಾಮರಾಜನಗರ,ಮೇ,3,2023(..):ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಬಗ್ಗೆ ಉಲ್ಲೇಖವಾಗಿರುವ ಕುರಿತು ಕಾಂಗ್ರೆಸ್ ನಾಯಕರ ವಿರುದ್ದ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ. ಇಂದು ಚಾಮರಾಜನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಸಚಿವ ವಿ.ಸೋಮಣ್ಣ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುವುದನ್ನು ಸೇರಿಸಿರುವ ಬಗ್ಗೆ ಕಿಡಿಕಾರಿದರು. ಕಾಂಗ್ರೆಸ್ ಪಕ್ಷದ ನಾಯಕರಿಗೆ ತಲೆ ಸರಿಯಿಲ್ಲ. ಕಾಂಗ್ರೆಸ್ ನಾಯಕರಿಗೆ ರಾಮನೂ ಬೇಕಿಲ್ಲ ಹನುಮನೂ ಬೇಕಿಲ್. ರಾಮನ ಭಕ್ತ ಅಂಜನೇಯನನ್ನೇ ಇವರು ನಿಷೇಧಿಸುತ್ತಾರೆಂದರೆ ಅದಕ್ಕೇನು ಅರ್ಥ? ಅವರಿಗೆ ರಾಮ, ಹನುಮ ಮತ್ತು ಬೇರೆ ದೇವರುಗಳು ಬೇಕಿಲ್ಲವೆಂದರೆ, ಗುಡಿಗಳಿಗೆ ಯಾಕೆ ಹೋಗುತ್ತಾರೆ, ಪೂಜೆ ಪುನಸ್ಕಾರ ಯಾಕೆ ಮಾಡುತ್ತಾರೆ, ಹಣೆಗೆ ವಿಭೂತಿ, ಕುಂಕುಮ ಹಚ್ಚಿಕೊಳ್ಳುವುದು ಏಕೆ ಎಂದು ಗುಡುಗಿದರು. : - - - -.