ಬಜರಂಗದಳ ಬ್ಯಾನ್ ಅನ್ನೋದು ಕಾಂಗ್ರೆಸ್ ಪಾಲಿಗೆ ತಿರುಕನ ಕನಸು ಇದ್ದಂತೆ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ. ಮೈಸೂರು,ಮೇ,3,2023(..):ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುವ ಬಗ್ಗೆ ಉಲ್ಲೇಖಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ. ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ. ಅಧಿಕಾರಕ್ಕೆ ಬಾರದೆ ಇರುವವರು ಏನೂ ಬೇಕಾದರೂ ಕನಸು ಕಾಣಬಹುದು. ಬಜರಂಗದಳ ಬ್ಯಾನ್ ಅನ್ನುವುದು ಕಾಂಗ್ರೆಸ್ ಪಾಲಿಗೆ ತಿರುಕನ ಕನಸು ಇದ್ದಂತೆ. ಕಾಂಗ್ರೆಸ್ ನವರು ಅಧಿಕಾರಕ್ಕೆ ಬರುವುದಿಲ್ಲ. ಇಂತಹ ಬ್ಯಾನ್ ಪ್ರಶ್ನೆಗಳೇ ಉದ್ಭವಿಸುವುದಿಲ್ಲ ಎಂದು ಟಾಂಗ್ ನೀಡಿದರು. ಸಿದ್ದರಾಮಯ್ಯ ಸೋತು ಮನೆ ಸೇರುತ್ತಾರೆ. ಸೋಮಣ್ಣ ಗೆದ್ದು ವಿಧಾನಸೌಧಕ್ಕೆ ಹೋಗ್ತಾರೆ. ವರುಣ ಮತ್ತು ಚಾಮರಾಜನಗರ ಎರೆಡು ಕ್ಷೇತ್ರಗಳಲ್ಲಿ ಸೋಮಣ್ಣ ಅವರ ಗೆಲುವು ನಿಶ್ಚಿತ. ವರುಣದಲ್ಲಿ ಗೆದ್ದು ಸೋಮಣ್ಣ ವಿಧಾನಸೌಧಕ್ಕೆ ಹೋಗುತ್ತಾರೆ. ಸಿದ್ದರಾಮಯ್ಯ ಸೋತು ಮನೆ ಸೇರುತ್ತಾರೆ. ಇದರಲ್ಲಿ ಯಾವ ಅನುಮಾನಗಳು ಬೇಡ ಎಂದು ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಎದ್ದಿದೆ. ನಾವು 130 ರಿಂದ 135 ಸ್ಥಾನ ನಾವು ಗೆಲ್ಲುತ್ತೇವೆ. ಸ್ಪಷ್ಟ ಬಹುಮತದ ಸರ್ಕಾರ ಈ ಭಾರಿ ನಿಶ್ಚಿತ. ಸಮಿಶ್ರ ಸರ್ಕಾರಗಳ ಪಾಡನ್ನ ನಾವು ಅನುಭವಿಸಿದ್ದೇವೆ, ನೀವು ನೋಡಿದ್ದೀರಾ. ಈ ಭಾರಿ ಅಂತಹ ಸ್ಥಿತಿ ಬರುವುದಿಲ್ಲ. ಮೋದಿ ಮತ್ತು ಅಮಿತ್ ಶಾ ಅತಿ ಹೆಚ್ಚಿನ ಸಮಯ ಕೊಟ್ಟಿದ್ದಾರೆ. ಇದರ ಲಾಭ ಪಕ್ಷಕ್ಕೆ ಆಗಲಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು. : - -- -