ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಸಹೋದರನ ನಿವಾಸದ ಮೇಲೆ ಐಟಿ ದಾಳಿ: ಮನೆಯ ಗಿಡದಲ್ಲಿ ನೇತು ಹಾಕಿದ್ದ 1 ಕೋಟಿ ರೂ. ವಶಕ್ಕೆ. ಮೈಸೂರು/ಮಂಗಳೂರು,ಮೇ,3,2023(..):ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಗೆ ಐಟಿ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದು ಅಶೋಕ್ ರೈ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳೂರು ಮತ್ತು ಮೈಸೂರಿನಲ್ಲಿ ದಾಳಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸಹೋದರ ಸುಬ್ರಹ್ಮಣ್ಯ ನಿವಾಸದ ಮೇಲೆ ದಾಳಿಯಾಗಿದ್ದು ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರಿನಲ್ಲಿ ಸುಬ್ರಹ್ಮಣ್ಯ ಅವರ ಮನೆಯ ಎದುರಿನ ಗಿಡದಲ್ಲಿ ಬ್ಯಾಗ್ ಒಂದು ನೇತು ಹಾಕಲಾಗಿತ್ತು. ಅದನ್ನು ತೆಗೆದು ಪರಿಶೀಲಿಸಿದ ಅಧಿಕಾರಿಗಳು ಶಾಕ್ ಆಗಿದ್ದು, ಗಿಡಕ್ಕೆ ನೇತು ಹಾಕಿದ್ದ ಬ್ಯಾಗ್ ​ನಲ್ಲಿ ಒಂದು ಕೋಟಿ ರೂಪಾಯಿ ಹಣ ಪತ್ತೆಯಾಗಿದೆ. ಅದನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. : - –----