ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಅದು ಗುಲಾಮಗಿರಿ ಸಂಕೇತ: ಈ ಬಾರಿ ಕಾಂಗ್ರೆಸ್ 140 ಸ್ಥಾನ ಗೆಲ್ಲುತ್ತೆ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ವಾಸ. ಕೊಪ್ಪಳ,ಮೇ,1,2023(..): ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇದೀಗ ಬಿಜೆಪಿ ನಾಯಕರ ವಿರುದ್ದ ತಮ್ಮಅಸಮಾಧಾನವನ್ನ ಮುಂದುವರೆಸಿದ್ದಾರೆ. ಇಂದು ಮಾತನಾಡಿದ ಜಗದೀಶ್ ಶೆಟ್ಟರ್, ರಾಹುಲ್ ಗಾಂಧಿ ಒಂದು ಮಾತು ಹೇಳಿದರು ಶೆಟ್ರೆ ನೀವು ಭ್ರಷ್ಟಾಚಾರಿ ಅಲ್ಲ. ಅದಕ್ಕೆ ಬಿಜೆಪಿ ಟಿಕೆಟ್ ನೀಡಲಿಲ್ಲ ಎಂದರು. 6 ಬಾರಿ ಗೆಲ್ಲಿಸಿದ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಯಿತು. ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಅದು ಗುಲಾಮಗಿರಿಯ ಸಂಕೇತ. ಶೆಟ್ಟರ್ ಮತ್ತೆ ಗೆದ್ರೆ ಮುಂಧೆ ಹೋಗ್ತಾರೆ ಎಂಬುದು ಕೆಲವರಿಗೆ ಆತಂಕವನ್ನುಂಟು ಮಾಡಿತ್ತು. ಹೀಗಾಗಿ ನನ್ನನ್ನು ಹೊರಗಡೆ ಕಳಿಸೋಕೆ ಸಂಚು ರೂಪಿಸಲಾಯಿತು. ಕಾಂಗ್ರೆಸ್ ಗೌರವಯುತವಾಗಿ ನಡೆಸಿಕೊಂಡರೇ ಸಾಕು ಎಂದಿದ್ದೇನೆ ಎಂದರು. ನನ್ನನ್ನ ಸೋಲಿಸೋಕೆ ಇದು ಗುಜರಾತ್ ಅಲ್ಲ, ಕರ್ನಾಟಕ. ನಾನು ಜನರ ಹೃದಯದಲ್ಲಿದ್ದೇನೆ. ಹುಬ್ಬಳ್ಳಿ ಜನರಿಗೆ ನನ್ನ ಬಗ್ಗೆ ಗೊತ್ತು. ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ 140 ಸ್ಥಾನ ಬರುತ್ತೆ. ನನ್ನನ್ನು ಸೋಲಿಸಲು ಘಟಾನುಘಟಿಗಳು ಚಾಲೆಂಜ್ ಮಾಡಿದ್ದಾರೆ. ಅದನ್ನ ಮೆಟ್ಟಿ ಗೆದ್ದು ಬರುತ್ತೇನೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು. : - - -140 - -