ಬೆಂಗಳೂರಿನಲ್ಲಿ ಡ್ರಗ್ಸ್ ಪೆಡ್ಲರ್ ಬಂಧನ: 1 ಕೋಟಿ ರೂ. ಮೌಲ್ಯದ ಗಾಂಜಾ ಪೊಲೀಸರ ವಶಕ್ಕೆ. ಬೆಂಗಳೂರು,,ಮೇ,1,2023(..):ಬೆಂಗಳೂರಿನ ಡಿ.ಜೆ ಹಳ್ಳಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ಸ್ ಮಾರುತ್ತಿದ್ದ ಓರ್ವ ಆರೋಪಿಯನ್ನ ಬಂಧಿಸಿ 1 ಕೋಟಿ ರೂ. ಮೌಲ್ಯದ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. ತನ್ವೀರ್ ಬಂಧಿತ ಡ್ರಗ್ಸ್ ಪೆಡ್ಲರ್. ಈತನ ಬಳಿ ಇದ್ದ 1 ಕೋಟಿ ರೂ ಮೌಲ್ಯದ 250 ಕೆಜಿ ಗಾಂಜಾವನ್ನ ಡಿ.ಜೆ ಹಳ್ಳಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿ.ಜೆ ಹಳ್ಳಿಯಲ್ಲಿ ಯುವಕರಿಗೆ ತನ್ವೀರ್ ಗಾಂಜಾ ಮಾರುತ್ತಿದ್ದ. ಇದೀಗ ಈತನನ್ನ ಬಂಧಿಸಲಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ. : - – -1 . – -