ಲಿಂಗಾಯತರ ಸಿಎಂ ಚರ್ಚೆಗೆ ಬ್ರೇಕ್: ರಾಜ್ಯ ನಾಯಕರಿಗೆ ಅಮಿತ್ ಶಾ ಎಚ್ಚರಿಕೆ ಬೆಂಗಳೂರು, ಏಪ್ರಿಲ್ 30, 2023 (..): ಲಿಂಗಾಯತರ ಸಿಎಂ ಚರ್ಚೆಗೆ ಬ್ರೇಕ್ ಹಾಕುವಂತೆ ಸ್ವತಃ ಕೇಂದ್ರ ಗೃಹ ಸಚಿವ ಅಮಿತ್​ ಶಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಬಿಎಸ್​ವೈ ಮನೆಯಲ್ಲಿ ಸಭೆ ಸೇರಿದ್ದ ಲಿಂಗಾಯತ ನಾಯಕರು ಆಡಿದ್ದ ಮಾತಿಗಳು ಮರುಕಳಿಸದಂತೆ ಬ್ರೇಕ್​​​ ಹಾಕಿದ್ದಾರೆ. ಲಿಂಗಾಯತ ಸಮುದಾಯಕ್ಕಷ್ಟೇ ಸಿಎಂ ಸ್ಥಾನ ಸೀಮಿತ ಎಂಬ ಸಂದೇಶ ರವಾನೆಯಾದ್ರೆ, ಪಕ್ಷದಿಂದ ಹಿಂದುಳಿದ ದಲಿತ ವರ್ಷಗಳು ಮತ್ತಷ್ಟು ದೂರವಾಗಲಿದೆ ಎಂಬ ಎಚ್ಚರಿಕೆಯನ್ನು ಶಾ ನೀಡಿದ್ದಾರೆ. ಜಗದೀಶ್​​ ಶೆಟ್ಟರ್​, ಸವದಿ ಕಾಂಗ್ರೆಸ್​ನತ್ತ ಸರಿದ ಬಳಿಕ ಬಿಜೆಪಿಯಲ್ಲಿ ಬಿರುಗಾಳಿ ಎದ್ದಿದೆ. ಪ್ರತಿ ದಿನ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಕ್ಷೇತ್ರ ಅತಿರಥ ನಾಯಕರಿಗೆ ಆತಿಥ್ಯ ನೀಡಿದೆ.. ಈ ಬೆನ್ನಲ್ಲೆ, ಲಿಂಗಾಯತ ಸಿಎಂ ದಾಳಕ್ಕೆ ಚಾಲನೆ ಸಿಕ್ಕಿದೆ.