ಕಾಂಗ್ರೆಸ್ಸಿಗರಿಂದ ಉಗ್ರರಂತೆ ಮಾತು: ರಾಜ್ಯದಲ್ಲಿ ರಾಜ್ಯಪಾಲರಿಗೆ ರಕ್ಷಣೆ ಇಲ್ಲ- ಸಿ.ಟಿ ರವಿ ಆಕ್ರೋಶ ಬೆಂಗಳೂರು,ಆಗಸ್ಟ್,20,2024 (..):ಕಾಂಗ್ರೆಸ್ ನಾಯಕರು ಉಗ್ರರಂತೆ ಮಾತನಾಡುತ್ತಿದ್ದಾರೆ. ಕರ್ನಾಟಕದಲ್ಲಿ ರಾಜ್ಯಪಾಲರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಂದು ಮಾತನಾಡಿದ ಸಿ.ಟಿ ರವಿ, ಗವರ್ನರ್ ವಿರುದ್ದ ಪ್ರಚೋದನಾಕಾರಿ ಹೇಳಿಕೆ ನೀಡುತ್ತಾರೆ. ಬಾಂಗ್ಲಾ ಮಾದರಿ ದಂಗೆ ಆಗುತ್ತೆ ಅಂತಾರೆ. ಇದು ಸರ್ಕಾರಿ ಪ್ರಾಯೋಜಿತ ದಂಗೆಯೋ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅಪರಾಧಿ ಅಂತಾ ಗವರ್ನರ್ ಹೇಳಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿದ್ದೇ ಅಪರಾಧನಾ..? ಎಂದು ಸಿ.ಟಿ ರವಿ ಕಿಡಿಕಾರಿದರು. ರಾಜ್ಯಪಾಲರ ವಿರುದ್ದ ಅಕ್ಷೇಪಾರ್ಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್ ನಾಯಕರನ್ನ ಡಾನ್ ಗಳಿಗೆ ಹೋಲಿಸಿದ ಸಿಟಿ ರವಿ, ಜಮೀರ್ ಅಹ್ಮದ್ ಖಾನ್ ಮಾತು ಡಾನ್ ಮಸ್ತಾನ್ ರೀತಿ ಇತ್ತು. ಡಿಕೆ ಶಿವಕುಮಾರ್ ಹೇಳಿಕೆ ಕೊತ್ವಾಲ್ ರೀತಿ ಇತ್ತು. ಐವಾನ್ ಡಿಸೋಜ ಹೇಳಿಕೆ ರೌಡಿಗಳಂತಿತ್ತು ಎಂದು ವಾಗ್ದಾಳಿ ನಡೆಸಿದರು. : , , , ,