ಮೈಸೂರಿನ ಐಶ್() ನಲ್ಲಿ ಶಾಲಾಪೂರ್ವ ಪದವಿ ಪ್ರಧಾನ ಸಮಾರಂಭ: ಸಾಧನೆ ತೋರಿದ ಮಕ್ಕಳಿಗೆ ಅಭಿನಂದನೆ. ಮೈಸೂರು,ಏಪ್ರಿಲ್,26,2023(..):ಶಾಲಾಪೂರ್ವ ಹಂತದ ಮಕ್ಕಳ ಯಶಸ್ಸನ್ನು ಆಚರಿಸುವ ಸಲುವಾಗಿ ಶಾಲಾಪೂರ್ವ ಪದವಿ ಪ್ರಧಾನ ಸಮಾರಂಭವನ್ನು ಮೈಸೂರಿನ ಅಖಿಲ ಭಾರತ್ ವಾಕ್ ಮತ್ತು ಶ್ರವಣ ಸಂಸ್ಥೆ, ವಿಶೇಷ ಶಿಕ್ಷಣ ವಿಭಾಗ ಇಂದು ಆಯೋಜಿತ್ತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಾಕ್-ಭಾಷಾ ಪೆಥಾಲಾಜಿಸ್ಟ್ ಇಂದಿರಾ ನಾಯರ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶೇಷ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ.ಪ್ರೀತಿ ವೆಂಕಟೇಶ್ ರವರು ಉಸ್ತುವಾರಿ ನಿರ್ದೇಶಕರಾದ ಪ್ರೊಫೆಸರ್ ಪಿ ಮಂಜುಳರವರು ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮವು 86 ವಿಶೇಷ ಮಕ್ಕಳು ಮತ್ತು ಅವರ ಪೋಷಕರನ್ನು ವಿಶೇಷ ಶಿಕ್ಷಣ ವಿಭಾಗದ ಪ್ರೀಸ್ಕೂಲ್ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದನ್ನು ಸಂಭ್ರಮಿಸುವಲ್ಲಿ ಯಶಸ್ವಿಯಾಗಿದೆ. ಅವರಲ್ಲಿ 90%(78 ಮಕ್ಕಳು) ಮುಖ್ಯವಾಹಿನಿಗೆ ಬರುತ್ತಿದ್ದು ಉಳಿದವರು 10% (8 ಮಕ್ಕಳು) ಸಮನ್ವಯ ಶಿಕ್ಷಣ ಪಡೆಯಲು ಸಿದ್ಧರಾಗಿದ್ದಾರೆ. ಮುಖ್ಯ ಅತಿಥಿಗಳು ಈ ಸಾಧನೆ ತೋರಿದ ಮಕ್ಕಳು, ಅವರ ಪೋಷಕರು ಮತ್ತು ಶಿಕ್ಷಕ ವೃಂದಕ್ಕೆ ಅಭಿನಂದಿಸಿದರು. ಇವರ ಸಾಧನೆಗೆ ಪೋಷಕರು ಮತ್ತು ಶಿಕ್ಷಕ ವೃಂದದ ಮಹತ್ವದ ಪಾತ್ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಭಾರಿ ನಿರ್ದೇಶಕರಾದ ಡಾ.ಪಿ.ಮಂಜುಳಾ ಅವರು ಈ ತರಬೇತಿಯ ವಿಶೇಷತೆ ಮತ್ತು ಇನ್ನೂ ಮುಂದೆ ಪೋಷಕರು ಹೇಗೆ ಮುಂದುವರಿಸಿಕೊಂಡು ಹೋಗಬೇಕು ಎಂಬುದರ ಕುರಿತು ಪೋಷಕರಿಗೆ ಕಿವಿಮಾತು ಹೇಳಿದರು. ಸಂಸ್ಥೆಯು ಸದಾಕಾಲ ತನ್ನ ಸಹಕಾರ ನೀಡಲಿದೆ ಎಂದು ಅಭಯ ಇತ್ತರು. ಕಾರ್ಯಕ್ರಮವು ಪದವಿಪ್ರಧಾನ ಮತ್ತು ಪ್ರಗತಿ ಪತ್ರ ನೀಡುವ ಮೂಲಕ ಕೊನೆಗೊಂಡಿತು. : --- –-