ನಕ್ಸಲರ ದಾಳಿಯಲ್ಲಿ 11 ಯೋಧರು ಹುತಾತ್ಮ. ಛತ್ತೀಸ್ ಘಡ,ಏಪ್ರಿಲ್,26,2023(..):ನಕ್ಸಲರ ದಾಳಿಯಲ್ಲಿ 11 ಯೋಧರು ಹುತಾತ್ಮರಾಗಿರುವ ಘಟನೆ ಛತ್ತೀಸ್ ಘಡ್ ನಲ್ಲಿ ನಡೆದಿದೆ. ದಾಂತೇವಾಡದ ಅರನಪುರದಲ್ಲಿ ಈ ಘಟನೆ ನಡೆದಿದೆ. ನಕ್ಸಲರ ವಿರುದ್ದ ಡಿಆರ್ ಜಿ ಸಿಬ್ಬಂದಿ ಕಾರ್ಯಾಚರಣೆಗಿಳಿದಿದ್ದರು. ನಕ್ಸಲರು ನೆಲಬಾಂಬ್ ಬಳಸಿ ಡಿಆರ್ ಜಿ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನ ಸ್ಪೋಟಿಸಿದ್ದಾರೆ. ಈ ವೇಳೆ ವಾಹನ ಚಾಲಕ ಸೇರಿ 11 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಸ್ಥಳಕ್ಕೆ ನಕ್ಸಲ್ ನಿಗ್ರಹ ದಳ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. : 11 - –-