ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದೆ, ಕಾಂಗ್ರೆಸ್ ಗೆ ಹೋಗಿರಲಿಲ್ಲ- ಜಗದೀಶ್ ಶೆಟ್ಟರ್ ಗೆ ಕುಟುಕಿದ ಬಿಎಸ್ ವೈ. ಬೆಂಗಳೂರು,ಏಪ್ರಿಲ್,26,2023(..):ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್ ಸೇರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತಿನಲ್ಲೇ ಕುಟುಕಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ನಾನು ಕೆಜೆಪಿ ಸ್ಥಾಪನೆ ಮಾಡಿ ದೊಡ್ಡ ಅಪರಾಧ ಮಾಡಿದೆ. ಕೆಜೆಪಿ ಕಟ್ಟಿದ್ದಕ್ಕೆ ರಾಜ್ಯದ ಜಜರ ಬಳಿ ಕ್ಷಮೆ ಕೇಳುತ್ತೇನೆ. ನಾನು ಭಾರತೀಯ ಜನತಾ ಪಾರ್ಟಿ ಬಿಟ್ಟು ಕೆಜೆಪಿ ಕಟ್ಟಿದ್ದೆ. ಆದರೆ ಜಗದೀಶ್‍ ಶೆಟ್ಟರ್ ರೀತಿ ಕಾಂಗ್ರೆಸ್ ಗೆ ಹೋಗಲಿಲ್ಲ ಎಂದು ಟಾಂಗ್ ನೀಡಿದರು. ಜಗದೀಶ್ ಶೆಟ್ಟರ್ ಸೋಲಿಸುವಲ್ಲಿ ಯಶಸ್ವಿಯಾಗುತ್ತೇವೆ. ವಿಶ್ವಾಸದ್ರೋಹ ಮಾಡಿದವರನ್ನ ನಾವು ಕ್ಷಮಿಸುವುದಿಲ್ಲ ಮಾಜಿ ಸಿಎಂ ಜಗದೀಶ್ ಟ್ಟರ್ ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಶೆಟ್ಟರ್ ವಾಪಸ್ ಬಿಜೆಪಿಗೆ ಬರುವ ಪ್ರಶ್ನೆಯೇ ಇಲ್ಲ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು. : --- - -