ಅಮಿತ್ ಶಾ ಹೇಳಿದ ತಕ್ಷಣ ಜನ ಜಗದೀಶ್ ಶೆಟ್ಟರ್ ಅವರನ್ನ ಸೋಲಿಸಿಬಿಡ್ತಾರಾ..?- ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್. ಬೆಂಗಳೂರು,ಏಪ್ರಿಲ್,25,2023(..):ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೋಗಿರುವ ಜಗದೀಶ್ ಶೆಟ್ಟರ್ ಅವರನ್ನ ಸೋಲಿಸಿ ಎಂದು ಕರೆ ನೀಡಿದ ಕೇಂದ್ರಗೃಹ ಸಚಿವ ಅಮಿತ್ ಶಾಗೆ ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ. ಈ ಕುರಿತು ಮಾತನಾಡಿದ ಸಿದ್ಧರಾಮಯ್ಯ, ಜಗದೀಶ್ ಶೆಟ್ಟರ್ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಮಿತ್ ಶಾ ಹೇಳಿದ ತಕ್ಷಣ ಜನ ಅವರನ್ನ ಸೋಲಿಸಿ ಬಿಡುತ್ತಾರಾ..? ಅಮಿತ್ ಶಾಗೂ ಕರ್ನಾಟಕಕ್ಕೂ ಏನ್ ಸಂಬಂಧ ಎಂದು ವಾಗ್ದಾಳಿ ನಡೆಸಿದರು. : - – – - .