ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ: ದೇಶ, ಸಮಾಜ ಒಡೆದಿದ್ದು ಕಾಂಗ್ರೆಸ್​- ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ. ಹಾವೇರಿ,ಏಪ್ರಿಲ್,24,2023(..):ನಾನು ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ಕೇವಲ ನಾವು ಘೋಷಣೆ ಭರವಸೆ ನೀಡಿಲ್ಲ ಅದನ್ನ ಅನುಷ್ಠಾನ ಕೂಡ ಮಾಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಹಾವೇರಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಬಗ್ಗೆ ಮಾತನಾಡುತ್ತಿದ್ದಾರೆ. ದಲಿತರು, ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ಕೊಟ್ಟಿದ್ದು ನಾವು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕ ನಿರ್ಲಕ್ಷ ಮಾಡಿದರು. ಒಡೆದು ಆಳುವ ಬ್ರಿಟೀಷರ ನೀತಿ ಕಾಂಗ್ರೆಸ್​ ನದ್ದು. ದೇಶ ಒಡೆದವರು ಕಾಂಗ್ರೆಸ್​ ನವರು. ಸಮಾಜ ಒಡೆದವರು ಕಾಂಗ್ರೆಸ್ ​ನವರು ಎಂದು ಕಿಡಿಕಾರಿದರು. ಉತ್ತರ ಕರ್ನಾಟಕ ಅಂದರೆ ಜಿಲೇಬಿ ಅಂತಾ ಇದ್ದರು, ಜಿಲೆಬಿ ಅಂದರೆ ಗೌಡ್ರು, ಲಿಂಗಾಯತರು, ಬ್ರಾಹ್ಮಣರು, ರಾಹುಲ್ ಗಾಂಧಿಗೆ ಬಸವಣ್ಣ ಅಂದರೂ ಗೊತ್ತಿಲ್ಲ, ಕೂಡಲ ಸಂಗಮನೂ ಗೊತ್ತಿಲ್ಲ. ಇವನ್ಯಾರವ ಇವನ್ಯಾರವ ಅನ್ನೋದು‌ ಬಿಟ್ಟು ಏನು ಅಂದಿದ್ದ ರಾಹುಲ್ ಗಾಂಧಿ? ಇಂಥವರನ್ನು ಕಟ್ಟಿಕೊಂಡು ಬಸವಣ್ಣನ ಬಗ್ಗೆ ಮಾತಾಡೋದು ಕೇಳಬೇಕಾ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು. ಕಾಂಗ್ರೆಸ್ ಸುಳ್ಳು ಭರವಸೆ ಕೊಡುವ ಪಕ್ಷ. ಕಾಂಗ್ರೆಸ್ ಸರ್ಕಾರ ಒಂದು ದೌರ್ಭಾಗ್ಯ. ಅದಕ್ಕೆ 2018ರಲ್ಲಿ ಮನೆಗೆ ಕಳುಹಿಸಿದ್ದಾರೆ. ಈಗ ಹೊಸದಾಗಿ ಅಡ್ಡಸೋಗು ತಕ್ಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್​ನ ಪ್ರಣಾಳಿಕೆಯ ಬಗ್ಗೆ ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು. : - - – - -