ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸುವಂತೆ ತನ್ನ ಬೆಂಬಲಿಗರಿಗೆ ಸೂಚಿಸಿದ ಜೆಡಿಎಸ್ ಎಂಎಲ್ ಸಿ. ಚಿಕ್ಕಮಗಳೂರು,ಏಪ್ರಿಲ್,24,2023(..):ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಪಕ್ಷಾಂತರ ಪರ್ವ ಹೆಚ್ಚಾಗಿದ್ದು ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ವಿಧಾನಪರಿಷತ್ ಜೆಡಿಎಸ್ ಸದಸ್ಯ ಬೋಜೇಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಗೆಲ್ಲಿಸುವಂತೆ ತಮ್ಮ ಅಭ್ಯರ್ಥಿಗೆ ಸೂಚಿಸಿದ್ದಾರೆ. ಜೆಡಿಎಸ್ ಎಂಎಲ್ ಸಿ ಭೋಜೇಗೌಡರು ತಮ್ಮ ಮನೆಯಲ್ಲಿ ಬೆಂಗಲಿಗರೊಂದಿಗೆ ಮಾತನಾಡಿರುವ ಈ ವಿಡಿಯೋ ವೈರಲ್ ಆಗಿದೆ. ಅದೆಲ್ಲಾ ಗೊತ್ತಿಲ್ಲ ನೀವೆಲ್ಲಾ ಸೇರಿ ಕಾಂಗ್ರೆಸ್ ಗೆ ವೋಟ್ ಹಾಕಬೇಕು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು. ವೋಟ್ ಹಾಕಿ ಗೆಲ್ಲಿಸಿ, ಮಿಕ್ಕಿದ್ದು ಅಮೇಲೆ ನೋಡಿಕೊಳ್ಳೋಣ ಎಂದು ಬೋಜೇಗೌಡ ಹೇಳಿದ್ದಾರೆ. ಎಸ್.ಎಲ್.ಭೋಜೇಗೌಡ ಅವರು ಎಚ್.ಡಿ‌ ಕುಮಾರಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ತಿಮ್ಮಶೆಟ್ಟಿ ಕಣದಲ್ಲಿದ್ದರೂ ಭೊಜೇಗೌಡ ಕಾಂಗ್ರೆಸ್ ಗೆ ಬೆಂಬಲಿಸುವಂತೆ ಸೂಚಿಸಿದ್ದಾರೆ. : - - – – –