ಹಾಸ್ಟೆಲ್‌ ಅ”ದಕ್ಷʼತೆ : ಪಿಯುಸಿ ವಿದ್ಯಾರ್ಥಿನಿ ಮೃತ ಮೈಸೂರು, ಆ.20,2024 : (..) ಕಾಲೇಜಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ. ಮೈಸೂರಿನ ಹೂಟಗಳ್ಳಿಯಲ್ಲಿರುವ ದಕ್ಷ ಪಿಯು ಕಾಲೇಜಿನ ಜಯಪ್ರಾರ್ಥನ (17) ಮೃತ ವಿದ್ಯಾರ್ಥಿನಿ. ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತಿದ್ದ ಜಯಪ್ರಾರ್ಥನ. ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು. ಭಾನುವಾರ ಊಟದ ನಂತರ ಜಯಪ್ರಾರ್ಥನ ಆರೋಗ್ಯದಲ್ಲಿ ಏರುಪೇರು. ವಿಚಾರ ತಿಳಿದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದ ಆಡಳಿತ ಮಂಡಳಿ. ಮಗಳ ಅನಾರೋಗ್ಯ ವಿಚಾರವನ್ನು ಪೋಷಕರ ಗಮನಕ್ಕೆ ತರದೇ ನಿರ್ಲಕ್ಷ್ಯ ತೋರಿದ ಆರೋಪ. ಸೋಮವಾರ ಬೆಳಗ್ಗೆ ಆರೋಗ್ಯದಲ್ಲಿ ಮತ್ತೆ ಏರುಪೇರು. ಆ ಸಮಯದಲ್ಲಿ ವಿಷಯ ಮುಟ್ಟಿಸಿದ ಆಡಳಿತ ಮಂಡಳಿ. ಪೋಷಕರು ಬರುವ ಮುನ್ನವೇ ಮೃತ ಪಟ್ಟ ಜಯಪ್ರಾರ್ಥನ. ಮಗಳ ಸಾವಿಗೆ ಕಾಲೇಜು ಆಡಳಿತ ಮಂಡಳಿಯ ಕಾರಣ ಎಂದು ಪೋಷಕರ ಆರೋಪ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. : , , , . : . (17) , , .