ವರುಣ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ: ಸಿದ್ದರಾಮಯ್ಯ ಅವರ ಗೆಲುವು ನಿಶ್ಚಿತ-ಶಾಸಕ ಯತೀಂದ್ರ ಸಿದ್ಧರಾಮಯ್ಯ. ಮೈಸೂರು,ಏಪ್ರಿಲ್,22,2023(..):ವರುಣ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ಸಿದ್ದರಾಮಯ್ಯ ಅವರ ಗೆಲುವು ನಿಶ್ಚಿತ. ವಿರೋಧಿಗಳು ಎಷ್ಟೇ ಪ್ರಯತ್ನ ಮಾಡಿದರೂ ಸಿದ್ದರಾಮಯ್ಯನವರನ್ನ ಸೋಲಿಸಲು ಸಾಧ್ಯವಿಲ್ಲ ಎಂದು ಶಾಸಕ ಯತೀಂದ್ರ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಇಂದಿನಿಂದ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡುತ್ತಾರೆ. ಈಗಾಗಲೇ ಎರಡು ದಿನ ಪ್ರಚಾರ ಮಾಡ್ತೇನೆ ಎಂದು ಹೇಳಿದ್ದಾರೆ. ಇಂದು ಕೆಲವು ಗ್ರಾಮಗಳಲ್ಲಿ ಪ್ರಚಾರ ಮಾಡಲಿದ್ದು. ದೊಡ್ಡ ಮಟ್ಟದ ಪ್ರಚಾರವೇನು ಮಾಡುತ್ತಿಲ್ಲ. ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಕ್ಷೇತ್ರದ ಜನತೆಯನ್ನ ಉದ್ದೇಶಿಸಿ ಮಾತನಾಡಲಿದ್ದಾರೆ. ವರುಣ ಕ್ಷೇತ್ರ ಯಾವಾಗಲು ಕಾಂಗ್ರೆಸ್ ನ ಭದ್ರಕೋಟೆ. ವಿರೋಧಿಗಳು ಎಷ್ಟೇ ಪ್ರಯತ್ನ ಮಾಡಿದರು ಸಿದ್ದರಾಮಯ್ಯನವರನ್ನ ಸೋಲಿಸಲು ಸಾಧ್ಯವಿಲ್ಲ ಎಂದರು. ಸಿದ್ದರಾಮಯ್ಯ ಸೋಲಿನ ಭಯದಿಂದ ಧವನ್ ರಾಕೇಶ್ ಕರೆ ತಂದು ಪ್ರಚಾರ ಮಾಡುತ್ತಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ಧರಾಮಯ್ಯ, ಪ್ರತಾಪ್ ಸಿಂಹ ಅವರ ಮನೆಯವರನ್ನ ಎಲ್ಲಿಯೂ ಕರೆದುಕೊಂಡು ಹೋಗಿಲ್ವೇ. ಧವನ್ ರಾಕೇಶ್ ನಾಮಪತ್ರ ಸಲ್ಲಿಸುವ ದಿನ ತಾತನಿಗೆ ಶುಭ ಕೋರಲು ಬಂದಿದ್ದ. ಧವನ್ ರಾಕೇಶ್ ಎಲ್ಲಿಯೂ ಸಹ ಪ್ರಚಾರಕ್ಕೆ ಬಂದಿಲ್ಲ. ನಮ್ಮ ಕುಟುಂಬ ಯಾವತ್ತೂ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರು ಸ್ಪರ್ಧೆ ಮಾಡಬಹುದು. ಸೋಮಣ್ಣನವರ ಕೊಡುಗೆ ವರುಣ ಕ್ಷೇತ್ರಕ್ಕೆ ಏನಿದೆ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. : – -- - .