ಡಿ.ಕೆ ಶಿವಕುಮಾರ್ ಹೆಲಿಕಾಪ್ಟರ್ ತಪಾಸಣೆ: ಚುನಾವಣಾಧಿಕಾರಿ ಮತ್ತು ಪೈಲೆಟ್ ನಡುವೆ ವಾಗ್ವಾದ. ಮಂಗಳೂರು,ಏಪ್ರಿಲ್,22,2023(..):ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು​ ಪತ್ನಿ ಅವರಿದ್ದ ಹೆಲಿಕಾಪ್ಟರ್​ ಅನ್ನು ಚುನಾವಣಾಧಿಕಾರಿ ತಪಾಸಣೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ. ಡಿಕೆ ಶಿವಕುಮಾರ್​ ಪತ್ನಿ ಉಷಾ, ಮಗ, ಮಗಳು ಮತ್ತು ಆಳಿಯ ಒಂದೇ ಹೆಲಿಕಾಪ್ಟರ್​​ನಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಹೆಲಿಕಾಪ್ಟರ್​ ಅನ್ನು ತಪಾಸಣೆ ಮಾಡಲು ಚುಣಾವಣಾಧಿಕಾರಿಗಳು ಮುಂದಾಗಿದ್ದರು. ಆಗ ಇದು ಖಾಸಗಿ ಹೆಲಿಕಾಪ್ಟರ್ ನಮ್ಮಲ್ಲಿ ತಪಾಸಣೆ ಮಾಡಲು ಅವಕಾಶ ಇಲ್ಲ ಎಂದು ಹೆಲಿಕಾಪ್ಟರ್ ಪೈಲಟ್​ ರಾಮ್ ದಾಸ್ ಹೇಳಿದ್ದಾರೆ. ಈ ಹಿನ್ನೆಲೆ ಮಾತಿಗೆ ಮಾತು ಬೆಳದಿದೆ. ಕೊನೆಗೂ ಚುನಾವಣಾಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆ ಮಾಡಿದ್ದಾರೆ. : –--