ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ: ಪಕ್ಷ ಬಿಡುವ ಮುನ್ನ ಇಬ್ಬರು ನಾಯಕರು ಯೋಚಿಸಬೇಕಿತ್ತು- ಅರುಣ್ ಸಿಂಗ್. ಬೆಳಗಾವಿ,ಏಪ್ರಿಲ್,20,2023(..):ಟಿಕೆಟ್ ಕೈತಪ್ಪಿದ ಹಿನ್ನೆಲೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಪಕ್ಷ ಬಿಡುವ ಮುನ್ನ ಇಬ್ಬರು ನಾಯಕರು ಯೋಚನೆ ಮಾಡಬೇಕಿತ್ತು. ಬಿಜೆಪಿಯಲ್ಲಿ ಕಾರ್ಯಕರ್ತರೇ ನಾಯಕರಾಗುತ್ತಾರೆ. ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ. ಕಾಂಗ್ರೆಸ್​​ ಮುಸ್ಲಿಂ ತುಷ್ಟೀಕರಣಕ್ಕಾಗಿ ಕೆಲಸ ಮಾಡುವ ಪಕ್ಷವಾಗಿದೆ. ಕಾಂಗ್ರೆಸ್​ ಮುಳುಗುತ್ತಿರುವ ಹಡಗು. ಭಾರತ, ಭಾರತದ ಪ್ರಜಾಪ್ರಭುತ್ವಕ್ಕೆ ಬೈಯುವ ರಾಹುಲ್ ಗಾಂಧಿಯವರ ಪಕ್ಷಕ್ಕೆ ಹೋಗೋದು ಅಂದರೆ ಏನು? ಎಂದು ಟಾಂಗ್ ನೀಡಿದರು. : - ---