ಕಠಿಣ ಸ್ಥಿತಿ ಬಂದರೇ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಹೇಳುತ್ತೇನೆ- ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್. ಚಿತ್ರದುರ್ಗ,ಏಪ್ರಿಲ್,20,2023(..):ಹೊಸದುರ್ಗ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೂಳಿಹಟ್ಟಿ ಶೇಖರ್, ಕಠಿಣ ಸ್ಥಿತಿ ಬಂದರೇ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಹೇಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೂಳಿಹಟ್ಟಿ ಶೇಖರ್, ಯಾವುದೇ ಬಿಜೆಪಿ ನಾಯಕರು ನನ್ನನ್ನ ಸಂಪರ್ಕಿಸಿಲ್ಲ ಯಾರೇ ಸಂಪರ್ಕ ಮಾಡಿದರೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ಯಾವುದೇ ಕಾರಣಕ್ಕೂ ಬಿಜೆಪಿ ಲಿಂಗಮೂರ್ತಿಗೆ ಬೆಂಬಲಿಸಲ್ಲ. ಕಠಿಣ ಸ್ಥಿತಿ ಬಂದರೇ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಹೇಳುತ್ತೇನೆ ನನಗೆ ಇವರೆಲ್ಲರೂ ಸಹಿಸದಷ್ಟು ಕಾಟ ಕೊಟ್ಟಿದ್ದಾರೆ. ಯಾರೋ ಜೂಜಾಡಿ ಸಾಲ ಮಾಡಿದವರು ಬಿಜೆಪಿಗೆ ಹೋಗುತ್ತಿರಬಹುದು ಎಂದು ಹೇಳಿದರು. : – - – – –