ಡಿಕೆ ಶಿವಕುಮಾರ್ ಟಿಕೆಟ್ ಮಾರಾಟ ಮಾಡಿದ್ದಾರೆ- ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಕಿಡಿ. ಮಂಗಳೂರು,ಏಪ್ರಿಲ್,20,2023(..):ವಿಧಾನಸಭೆ ಚುನಾವಣಾ ಕಣ ರಂಗೇರಿದ್ದು, ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈ ನಡುವೆ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಕೈತಪ್ಪಿದ್ದ ಹಿನ್ನೆಲೆ ಕಾಂಗ್ರೆಸ್ ಗೆ ಮೊಯ್ದೀನ್ ಬಾವಾ ಗುಡ್ ಬೈ ಹೇಳಿದ್ದಾರೆ. ಕಾಂಗ್ರೆಸ್ ಗೆ ರಾಜೀನಾಮೆ ಘೋಷಿಸಿ ಮಾತನಾಡಿದ ಮೊಯಿದ್ದೀನ್ ಬಾವಾ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಂಗ್ರೆಸ್ ಟಿಕೆಟ್​ ಅನ್ನು ಮಾರಾಟ ಮಾಡಿದ್ದಾರೆ, ಹಾಲಿ ಅಭ್ಯರ್ಥಿ ಇನಾಯತ್ ಅಲಿ ಟಿಕೆಟ್​ಗಾಗಿ 2 ಕೋಟಿ ರೂ. ಕೊಟ್ಟಿದ್ದಾರೆ. ಇನಾಯತ್ ಅಲಿ ಡಿಕೆ ಶಿವಕುಮಾರ್​ ಅವರ ಬಿಸ್ನೆಸ್ ಪಾರ್ಟ್ನರ್. ಡಿಕೆ ಶಿವಕುಮಾರ್ ಕೇಸ್ ನಲ್ಲಿ ಇನಾಯತ್ ತಮ್ಮನನ್ನ ಇಡಿ ವಿಚಾರಣೆ ಮಾಡಿತ್ತು ಹಾಗಾಗಿ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ತೊರೆದಿರುವ ಮೊಯಿದ್ದೀನ್ ಬಾವಾ ಜೆಡಿಎಸ್ ಸೇರ್ಪಡೆಗೊಂಡು ಮಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. : – - – - - .