ಕಾಂಗ್ರೆಸ್ ಸೇರ್ಪಡೆಗೆ ಎಸ್.ಎ ರಾಮದಾಸ್ ಗೆ ಪರೋಕ್ಷವಾಗಿ ಆಹ್ವಾನ ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ. ಮೈಸೂರು,ಏಪ್ರಿಲ್,18,2023(..):ಕೆ.ಆರ್ ಕ್ಷೇತ್ರದಿಂದ ಹಾಲಿ ಶಾಸಕ ಎಸ್.ಎ ರಾಮದಾಸ್ ಅವರಿಗೆ ಟಿಕೆಟ್ ಕೈತಪ್ಪಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪರೋಕ್ಷವಾಗಿ ಆಹ್ವಾನ ನೀಡಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ, ಬಿಜೆಪಿಯಲ್ಲಿ ಹಿರಿಯ ನಾಯಕರನ್ನ ಬಿಜೆಪಿ ಸರಿಯಾಗಿ ನಡೆಸಿಕೊಂಡಿಲ್ಲ. ಆ ಸಾಲಿನಲ್ಲಿ ಎಸ್. ಎ ರಾಮದಾಸ್ ಕೂಡ ಒಬ್ಬರು. ನಮ್ಮ ಪಕ್ಷ ಸಿದ್ದಾಂತ ಒಪ್ಪಿ ಯಾರೇ ಬಂದರೂ ಸ್ವಾಗತಿಸುತ್ತೇನೆ ಎಂದು ಪರೋಕ್ಷವಾಗಿ ರಾಮದಾಸ್ ಅವರಿಗೆ ಆಹ್ವಾನ ನೀಡಿದ್ದಾರೆ. ವರುಣಾಗೆ ವಿ.ಸೋಮಣ್ಣ ಬರಲು ಸಂತೋಷ್ ಕಾರಣ. ವರುಣಾದಲ್ಲಿ ಸ್ಪರ್ಧಿಸಲು ವಿ.ಸೋಮಣ್ಣಗೆ ಇಷ್ಟವಿರಲಿಲ್ಲ. ಆದರೂ ಒತ್ತಡ ಹೇರಿ ಕಣಕ್ಕಿಳಿಸಿದ್ದಾರೆ. ರಾಜ್ಯ ಬಿಜೆಪಿ ಒಬ್ಬ ವ್ಯಕ್ತಿಯ ಕಪಿಮುಷ್ಟಿಯಲ್ಲಿದೆ. ಸೋಮಣ್ಣಗೂ ವರುಣಾ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. : - –- - –- .