ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಲಿ : ರೈತ ಮಹಿಳೆ ನಿಲ್ಲಿಸಿ ಗೆಲ್ಲಿಸಿಕೊಂಡು ಬರ್ತೇನೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ಮಂಡ್ಯ,ಏಪ್ರಿಲ್,18,2023(..):ಬಿಜೆಪಿ ಪಕ್ಷದ ವರಿಷ್ಟರು ಸೂಚಿಸಿದರೇ ಮಂಡ್ಯಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿರುವ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸ್ಪರ್ಧಿಸಲಿ. ಜೆಡಿಎಸ್ ನಿಂದ ರೈತ ಮಹಿಳೆಯನ್ನ ನಿಲ್ಲಿಸಿ ಗೆಲ್ಲಿಸಿಕೊಂಡು ಬರ್ತೇನೆ ಎಂದಯ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮಂಡ್ಯದಲ್ಲಿ ಸುಮಲತಾರಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಸಂಸದೆ ಸುಮಲತಾರಷ್ಟು ವರ್ಚಸ್ಸು ನನಗಿಲ್ಲ. ಮಂಡ್ಯಕ್ಕೆ ಸುಮಲತಾ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಗಾಗಿ ಅವರ ಸವಾಲನ್ನ ನಿರಾಕರಣೆ ಮಾಡತ್ತೇನೆ ಎಂದು ವ್ಯಂಗ್ಯವಾಡಿದರು. ಸುಮಲತಾ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಮಂಡ್ಯ ಜನರು ಜೆಡಿಎಸ್ ಗೆಲ್ಲಿಸುತ್ತಾರೆ ನಾಳೇ ಮಂಡ್ಯ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ಅವಶ್ಯಕತೆ ಇದ್ದರೇ ಹೆಚ್.ಡಿ ದೇವೇಗೌಡರು ಪ್ರಚಾರಕ್ಕೆ ಬರ್ತಾರೆ ಎಂದರು. : - –- - .