ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ಭ್ರಷ್ಟಾಚಾರ: ಅವರು 40ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬಾರದು- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಬೀದರ್,ಏಪ್ರಿಲ್,17,2023(..):ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ಭ್ರಷ್ಟಾಚಾರದಲ್ಲಿ ತೊಡಗುತ್ತದೆ. ಹೀಗಾಗಿ ಬಿಜೆಪಿಯವರು 40ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದರು. ಬೀದರ್ ಹುಮ್ನಾಬಾದ್ ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಶಾಸಕರನ್ನ ಬಿಜೆಪಿ ಖರೀದಿ ಮಾಡುತ್ತೆ. ರಾಜ್ಯದಲ್ಲಿ ಬಿಜೆಪಿ 40ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಬಾರದು. ಒಬಿಸಿ ಸಮುದಾಯವನ್ನ ನಾನು ಅಪಮಾನಿಸಿದ್ದೇನೆ ಎಂದಿದ್ದಾರೆ .ನಾನು ಎಂದಿಗೂ ಯಾವ ಸಮುದಾಯವನ್ನ ಅಪಮಾನ ಮಾಡಿಲ್ಲ ಎಂದರು. ಯುಪಿಎ ಸರ್ಕಾರ ಒಬಿಸಿ, ದಲಿತರು, ಆದಿವಾಸಿಗಳ ಜನಗಣತಿ ಮಾಡಿತ್ತು. ಈ ಎಲ್ಲಾ ಅಂಕಿ ಅಂಶ ಕೇಂದ್ರದ ಬಳಿಯೇ ಇದೆ. ಅದರೆ ಕೇಂದ್ರ ಈ ಅಂಕಿ ಅಂಶಗಳನ್ನ ಬಹಿರಂಗ ಪಡಿಸುತ್ತಿಲ್ಲ. ನ್ಯಾಯ ಕೊಡಿಸುವುದಾದರೇ ಜಾತಿಗಣತಿ ಬಿಡುಗಡೆ ಮಾಡಿ. ಇಲ್ಲವಾದರೆ ನಮ್ಮ ಸರ್ಕಾರ ಆ ಕೆಲಸ ಮಾಡುತ್ತದೆ ಎಂದು ರಾಹುಲ್ ಗಾಂಧಿ ಎಂದು ಹೇಳಿದರು. : –- –- - - .