ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜ್ಞಾನಬುತ್ತಿಯಿಂದ ಉಚಿತ ತರಬೇತಿ: ಅರ್ಜಿ ಸಲ್ಲಿಸಿ ಮೈಸೂರು,ಆಗಸ್ಟ್, 20,2024 (..):ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ(ಎಸ್‌ಎಸ್‌ಸಿ) ದವರು ನಡೆಸುವ ವಿವಿಧ ಹಂತದ ಪರೀಕ್ಷೆಗಳಿಗೆ ಹಾಗೂ ಐಬಿಪಿಎಸ್ ನಡೆಸಲಿರುವ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ಉಚಿತ ತರಬೇತಿಯನ್ನು ನೀಡಲು ಮೈಸೂರಿನ ಜ್ಞಾನಬುತ್ತಿ ಸಂಸ್ಥೆ ನಿರ್ಧರಿಸಿದೆ. ಆಸಕ್ತರು ದಿನಾಂಕ 24.08.2024 ರೊಳಗಾಗಿ ಪ್ರತಿದಿನ ಸಂಜೆ 5:30 ರಿಂದ 7:30 ರೊಳಗಾಗಿ ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಸಂಸ್ಥೆಯ ಕಾರ್ಯದರ್ಶಿ ಹೆಚ್. ಬಾಲಕೃಷ್ಣ (9448117455) ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ. ವಿವರಗಳಿಗೆ ಸಂಯೋಜಕರಾದ ಸಿ.ಕೆ. ಕಿರಣ್‌ ಕೌಶಿಕ್ (9972830857) ಮತ್ತು ಕೆ.ವೈ ನಾಗೇಂದ್ರ (8296788251) ಅವರನ್ನು ಸಂಪರ್ಕಿಸಲು ಕೋರಲಾಗಿದೆ. ನಾಲ್ಕು ದಶಕಗಳಿಂದಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಾ ಬಂದಿರುವ ಜ್ಞಾನಬುತ್ತಿ ಸಂಸ್ಥೆಯಿಂದ ತರಬೇತು ಪಡೆದವರು ಸಾವಿರಾರು ಜನ ವಿವಿಧ ಬ್ಯಾಂಕ್‌ ಗಳಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಹೊಸ ಬ್ಯಾಂಕಿಂಗ್ ಉಚಿತ ತರಬೇತಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. : , , ,