ಬಿಜೆಪಿಯಿಂದ ಸಂವಿಧಾನ ದುರುಪಯೋಗ: ಪ್ರಜಾಪ್ರಭುತ್ವಕ್ಕೆ ಮಾರಕ- ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು,ಆಗಸ್ಟ್,20,2024 (..):ಬಿಜೆಪಿಯು ಸಂವಿಧಾನವನ್ನ ದುರುಪಯೋಗಪಡಿಸಿಕೊಳ್ಳುತ್ತಿದ್ದು, ಪ್ರಜಾಪ್ರಭುತ್ವಕ್ಕೆ ಮಾರಕ ಆಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ಇಂದು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯೇ ರಾಜ್ಯಪಾಲರನ್ನ ಬಳಸಿಕೊಳ್ಳುತ್ತಿದ್ದು, ಸಂವಿಧಾನ ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವದ ವಿರುದ್ದ ನಡೆದುಕೊಳ್ಳುತ್ತಿದೆ ಎಂದರು. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಎಸ್ ಐಟಿ ತನಿಖೆ ಕೇಳಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಾಣು ರಾಜ್ಯಪಾಲರ ವಕ್ತಾರನೂ ಅಲ್ಲ. ಲೋಕಾಯುಕ್ತರ ವಕ್ತಾರನೂ ಅಲ್ಲ. ನಾನು ಕಾಂಗ್ರೆಸ್ ಪಕ್ಷದ ಸ್ಪೋಕ್ ಪರ್ಸನ್ ಎಂದು ಹೇಳಿದರು. : , , , ,