ಕೋಲಾರದಿಂದ ಸಿದ್ಧರಾಮಯ್ಯಗಿಲ್ಲ ಟಿಕೆಟ್: ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್. ಬೆಂಗಳೂರು:,ಏಪ್ರಿಲ್,15,2023(..): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇಂದು 3ನೇ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್​ 43 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿತ್ತು. ಇದೀಗ ಆ 43 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸಿದ್ದರಾಮಯ್ಯ ಅವರಿಗೆ ಕೋಲಾರ ಟಿಕೆಟ್​ ನೀಡಿಲ್ಲ. ಬದಲಿಗೆ ಕೋಲಾರ ಟಿಕೆಟ್​ ಕೊತ್ತೂರು ಮಂಜುನಾಥ್ ಅವರಿಗೆ ನೀಡಲಾಗಿದೆ. ಇದರಿಂದ ಸಿದ್ದರಾಮಯ್ಯ ವರುಣಾದಿಂದ ಮಾತ್ರ ಸ್ಪರ್ಧೆ ಫಿಕ್ಸ್ ಆಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಮೂರನೇ ಪಟ್ಟಿ ಹೀಗಿದೆ. ಕೋಲಾರ – ಕೊತ್ತೂರು ಮಂಜುನಾಥ್ ದಾಸರಹಳ್ಳಿ- ಧನಂಜಯ ಚಿಕ್ಕಪೇಟೆ – ಆರ್ ವಿ ದೇವರಾಜ್ ಅಥಣಿ- ಲಕ್ಷಣ್ ಸವದಿ ಕೃಷ್ಣರಾಜ – ಎಂ.ಕೆ‌ ಸೋಮಶೇಕರ್ ಶಿಖಾರಿಪುರ- ಗೋಣಿ ಮಾಲ್ತೇಶ್ ತೇರದಾಳ – ಸಿದ್ದು ಕೊಣ್ಣೂರರಚ ತರಿಕೆರೆ- ಶ್ರೀನಿವಾಸ್ ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್ ಅರಸಿಕೆರೆ- ಶಿವಲಿಂಗೇಗೌಡ ಬೊಮ್ಮನಹಳ್ಳಿ – ಉಮಾಪತಿ ಗೌಡ ಬೆಂಗಳೂರು ದಕ್ಷಿಣ- ಆರ್ ಕೆ ರಮೇಶ ನಯನ- ಮೋಟಮ್ಮ ಮೂಡಿಗೆರೆ ಮದ್ದೂರು- ಉದಯ್ ಗೌಡ’ ಶಿವಮೊಗ್ಗ – ಯೋಗೇಶ್ ನವಲಗುಂದ- ಕೋನರೆಡ್ಡಿ ಕುಂದಗೋಳ- ಕುಸುಮಾ ಶಿವಳ್ಳಿ ಕಲಬುರಗಿ ಗ್ರಾಮೀಣ- ರೇವುನಾಯಕ್ ಬೆಳಮಗಿ ಅರಭಾವಿ ಕ್ಷೇತ್ರ-ಅರವಿಂದ ದಳವಾಯಿ ರಾಯಬಾಗ ಕ್ಷೇತ್ರ-ಮಹಾವೀರ ಮೋಹಿತ್​ ಬೆಳಗಾವಿ ಉತ್ತರ ಕ್ಷೇತ್ರ-ಆಸೀಫ್ ಸೇಠ್​ ಬೆಳಗಾವಿ ದಕ್ಷಿಣ ಕ್ಷೇತ್ರ- ಪ್ರಭಾವತಿ ಮಾಸ್ತಿ ಮರಡಿ. : - -: 3rd – – .