ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ- ಆಹ್ವಾನ ನೀಡಿದ ಮಾಜಿ ಸಿಎಂ ಸಿದ್ಧರಾಮಯ್ಯ. ಬೆಳಗಾವಿ,ಏಪ್ರಿಲ್,15,2023(..):ಹುಬ್ಬಳ್ಳಿ ಸೆಂಟ್ರಲ್ ನಿಂದ ಮತ್ತೆ ಸ್ಪರ್ಧೆಗಾಗಿ ಟಿಕೆಟ್ ಪಡೆದುಕೊಳ್ಳಲು ಹರಸಾಹಸ ಪಡುತ್ತಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಕಾಂಗ್ರೆಸ್ ಬರಲು ಮಾಜಿ ಸಿಎಂ ಸಿದ್ಧರಾಮಯ್ಯ ಆಹ್ವಾನ ನೀಡಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಜಗದೀಶ್ ಶೆಟ್ಟರ್ ಜೊತೆ ಮಾತನಾಡಿಲ್ಲ. ಅವರು ಪಕ್ಷಕ್ಕೆ ಬರೋದಾದ್ರೆ ಸ್ವಾಗತ. ಬಿಜೆಪಿ ಹಿರಿಯ ನಾಯಕರನ್ನ ಸರಿಯಾಗಿ ನಡೆಸಿಕೊಂಡಿಲ್ಲ. ಶೆಟ್ಟರ್ ಸವದಿ ಕೆ.ಎಸ್ ಈಶ್ವರಪ್ಪಗೆ ಈ ರೀತಿ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು. ನನಗೆ ಕ್ಷೇತ್ರವಿಲ್ಲ ಎನ್ನುತ್ತಿದ್ದ ಕೆ.ಎಸ್ ಈಶ್ವರಪ್ಪಗೆ ಟಿಕೆಟ್ ಇಲ್ಲ: ಪಾಪಾ ಹೀಗಾಗಬಾರದಿತ್ತು.. ನನಗೆ ಕ್ಷೇತ್ರ ಇಲ್ಲ ಎನ್ನುತ್ತಿದ್ದ ಈಶ್ವರಪ್ಪಗೆ ಟಿಕೆಟ್ ಸಿಕ್ಕಿಲ್ಲ . ನನಗೆ ಕ್ಷೇತ್ರವಿಲ್ಲ ಎಂದು ಟೀಕೆ ಮಾಡುತ್ತಿದ್ದರು. ಪಾಪ ಈಶ್ವರಪ್ಪರಿಗೆ ಹೀಗೆ ಮಾಡಬಾರದಿತ್ತು. ನನಗೂ 25 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಕರೆದಿದ್ದಾರೆ. ಈಶ್ವರಪ್ಪ ಪಕ್ಷದ ಸಿದ್ದಾಂತ ಅಂತಿದ್ರು ಈಗ ಎಲ್ಲಿ ಹೋದ್ರು ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು. ನನ್ನನ್ನ ಕಟ್ಟಿಹಾಕಲು ಬಿಜೆಪಿ ನಾಯಕರು ಟಾರ್ಗೆಟ್ ಮಾಡಿದ್ದಾರೆ. ಬೊಮ್ಮಾಯಿ ವಿರುದ್ಧ ವಿನಯ್ ಕುಲಕರ್ಣಿ ನಿಲ್ಲಲ್ಲ. ಇಂದು ಅಥವಾ ನಾಳೆ 3ನೇ ಪಟ್ಟಿ ಬಿಡುಗಡೆಯಾಗಲಿದೆ ಎಂದರು. : - - – -- -