ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಕೋಟಿ ರೂ. ಜಪ್ತಿ: ಇಬ್ಬರು ಪೊಲೀಸರ ವಶಕ್ಕೆ. ಬೆಂಗಳೂರು,ಏಪ್ರಿಲ್,13,2023(..):ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1 ಕೋಟಿರೂ. ಹಣವನ್ನ ಜಪ್ತಿ ಮಾಡಿದ ಪೊಲೀಸರು ಇಬ್ಬರನ್ನ ವಶಕ್ಕೆ ಪಡೆದಿದ್ದಾರೆ. ಎಸ್ ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ 1 ಕೋಟಿ ನಗದು ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಣ ಸಾಗಿಸುತ್ತಿದ್ದ ಸುರೇಶ್ ಮತ್ತು ಪ್ರವೀಣ್ ಎಂಬುವವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆಟೋ ಕೆಟ್ಟು ನಿಂತಿದ್ದ ವೇಳೆ ಪೊಲೀಸರು ಪರಿಶೀಲಸಿದಾಗ 1 ಕೋಟಿ ರೂ. ಪತ್ತೆಯಾಗಿದೆ. ಎಸ್.ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇಬ್ಬರನ್ನ ವಿಚಾರಣೆ ನಡೆಸಲಾಗುತ್ತಿದೆ. : 1 – ----