ಬಿಎಸ್ ವೈ ಆಪ್ತ ಎನ್.ಆರ್ ಸಂತೋಷ್ ಗೆ ಕೈ ತಪ್ಪಿದ ಟಿಕೆಟ್: ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿ ಬೆಂಬಲಿಗರಿಂದ ಆಕ್ರೋಶ. ಹಾಸನ,ಏಪ್ರಿಲ್,13,2023(..):ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತ ಎನ್​​ಆರ್ ಸಂತೋಷ್ ​ಗೆ ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಈ ಹಿನ್ನೆಲೆಯಲ್ಲಿ ಸಂತೋಷ್ ಅವರ ಬೆಂಬಲಿಗರು ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡ​ ಎನ್​​ಆರ್ ಸಂತೋಷ್​, ಬೆಂಬಲಿಗರ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಇನ್ನೊಂದೆಡೆ ಎನ್​ಆರ್ ಸಂತೋಷ್​ ಅವರ ಮನೆ ಮುಂದೆ ಅವರ ಅಭಿಮಾನಿಗಳು ಹೈಡ್ರಾಮಾವನ್ನೇ ಸೃಷ್ಠಿಸಿದ್ದು, ಬಿಜೆಪಿ ಬಾವುಟಕ್ಕೆ ಬೆಂಕಿ ಹಚ್ಚಿ, ಬಿಜೆಪಿ ಚುನಾವಣಾ ಪ್ರಚಾರಕ್ಮೆ ರೆಡಿಯಾಗಿದ್ದ ವಾಹನದ ಮೇಲಿನ ಬಿಜೆಪಿ ಕಮಲ ಚಿಹ್ನೆ ಹರಿದು ಹಾಕಿ ಆಕ್ರೋಶ ಹೊರ ಹಾಕಿದರು. ಇನ್ನು ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಎನ್​ಆರ್​ ಸಂತೋಷ್, ಬೆಂಬಲಿಗರ ಅಭಿಪ್ರಾಯದಂತೆ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತೀರ್ಮಾನಿಸಿದ್ದು, ಸೋಮವಾರ ಐವತ್ತು ಸಾವಿರ ಜನರರೊಂದಿಗೆ ಹೋಗಿ ನಾಮಪತ್ರ ಸಲ್ಲಿಸುವುದಾಗಿ ಘೋಷಣೆ ಮಾಡಿದ್ದಾರೆ. : - – - – .