ಮತಪರಿವರ್ತನೆ ಮಾಡುವ ಹಲವು ನಾಯಕರು ನಾಳೆ ಜೆಡಿಎಸ್ ಸೇರಲಿದ್ದಾರೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ಕಲ್ಬುರ್ಗಿ,ಏಪ್ರಿಲ್,13,2023(..):ರಾಜ್ಯ ವಿಧಾನಸಭಾ ಚುನಾವಣೆ ಕಣ ರಂಗೇರಿದ್ದು ಈ ನಡುವೆ ನಾಳೆ ಹಲವು ನಾಯಕರು ಜೆಡಿಎಸ್​ ಸೇರುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಮುಳುಗೆ ಹೋಗಿದೆ ಅಂತ ಹೇಳುತ್ತಿದ್ದರು. ಆದರೆ ಇದೀಗ ನಲವತ್ತು ಜನ ಗೆಲ್ಲುವ ವಿಶ್ವಾಸವಿದೆ. ಮತಪರಿವರ್ತನೆ ಮಾಡುವ ಅನೇಕ ನಾಯಕರು ಜೆಡಿಎಸ್ ಗೆ ಸೇರುತ್ತಿದ್ದಾರೆ. ನಾಳೆ ಬೆಂಗಳೂರು ಪಕ್ಷದ ಕಚೇರಿಯಲ್ಲಿ ಅನೇಕರು ಜೆಡಿಎಸ್ ಸೇರ್ತಿದ್ದಾರೆ ಎಂದರು. ಇನ್ನು ನಾಳೆಯೇ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ ಮಾಡುತ್ತೇವೆ. ಹಾಸನ ಟಿಕೆಟ್ ಬಗ್ಗೆ ಇನ್ನೆರಡು ದಿನಗಳಲ್ಲಿ ಫೈನಲ್ ಆಗಲಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. : –- –- - - .