ಶಿವಮೊಗ್ಗದಲ್ಲಿ ದಾಖಲೆ ಇಲ್ಲದ 5.83 ಕೋಟಿ ಮೌಲ್ಯದ ಚಿನ್ನ ಪೊಲೀಸರ ವಶಕ್ಕೆ. ಶಿವಮೊಗ್ಗ,ಏಪ್ರಿಲ್,11,2023(..):ಶಿವಮೊಗ್ಗದಲ್ಲಿ ದಾಖಲೆ ಇಲ್ಲದ 5.83 ಕೋಟಿ ಮೌಲ್ಯದ ಚಿನ್ನವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ 5.83 ಕೋಟಿ ಮೌಲ್ಯದ 9 ಕೆಜಿ 565 ಗ್ರಾಂ ಚಿನ್ನ ಪತ್ತೆಯಾಗಿದ್ದು, ಕೋಟೆ ಠಾಣಾ ಪೊಲೀಸರು ಚಿನ್ನವನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಶಿವಮೊಗ್ಗದಲ್ಲಿ ವಿವಿದೆಡೆ ದಾಖಲೆ ಇಲ್ಲದ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಹಣವನ್ನ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ನಗದಲ್ಲಿ ದಾಖಲೆ ಇಲ್ಲ ಸಾಗಿಸುತ್ತಿದ್ದ 30 64 ಲಕ್ಷ ರೂ. ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ 27.60 ಕೋಟಿ ರೂ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1.79 ಕೋಟಿ ರೂ. ಭದ್ರಾವತಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.25 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. : - 5.83 - – – .