ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೆಟ್: ರಾಜಿ ಪ್ರಶ್ನೆಯೇ ಇಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ಬಳ್ಳಾರಿ,ಏಪ್ರಿಲ್,11,2023(..):ಹಾಸನದಲ್ಲಿ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುತ್ತದೆ. ಈ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಕೊನೆ ಕ್ಷಣದವರೆಗೂ ಭವಾನಿ ರೇವಣ್ಣರಿಗೆ ಟಿಕೆಟ್ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬಳ್ಳಾರಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಹಾಸನ ಟಿಕೆಟ್ ವಿಚಾರವಾಗಿ ಶಕುನಿಗಳು ತಲೆಕೆಡಿಸಿದ್ದಾರೆ. ಮನೆ ಹಾಳು ಮಾಡುವ ಶಕುನಿಗಳಿದ್ದಾರೆ. ಶಕುನಿ ತಲೆಕೆಡಿಸಿದ್ದಕ್ಕೆ ತಾನೆ ಕುರುಕ್ಷೇತ್ರ ನಡೆದಿದ್ದು. ನಮ್ಮ ಕುಟುಂಬದಲ್ಲಿ ಶಕುನಿಗಳಿಲ್ಲ. ಬೇರೆ ಕಡೆಯಿದ್ದಾರೆ ಎಂದರು. ಹಾಸನ ಟಿಕೆಟ್ ವಿಚಾರವಾಗಿ ರೇವಣ್ಣ ನನ್ನ ಸಂಪರ್ಕದಲ್ಲಿಲ್ಲ. ಟಿಕೆಟ್ ವಿಚಾರವಾಗಿ ಮಾತನಾಡೋಕೆ ರೇವಣ್ಣಗೆ ಭಯ ಕಾಡುತ್ತಿದೆ ಟಿಕೆಟ್ ವಿಚಾರವಾಗಿ ರೇವಣ್ಣ ನನ್ನ ಮನವೊಲಿಸಬೇಕಲ್ಲವೇ..? ಯಾವ ಕಾರಣಕ್ಕೆ ನಿಲ್ಲಬೇಕು ಅನ್ನೋದಕ್ಕೆ ನನ್ನ ಮನವೊಲಿಸಬೇಕಲ್ವೆ..? ಎಂದರು. : - – - - - – .