7 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ: ಇಬ್ಬರು ವಿದೇಶಿ ಡ್ರಗ್ ಫೆಡ್ಲರ್ ಗಳ ಬಂಧನ. ಬೆಂಗಳೂರು,ಏಪ್ರಿಲ್,10,2023(..):ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಡ್ರಗ್ ಫೆಡ್ಲರ್ ​ಗಳನ್ನ ಬಂಧಿಸಿರುವ ವಿವಿಪುರಂ ಠಾಣಾ ಪೊಲೀಸರು 7 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ್ದಾರೆ. ನೈಜೀರಿಯಾ ಮೂಲದ ಲಾರೆನ್ಸ್ ಹಾಗೂ ಚುಕ್ವೂನೇಜಿಮ್ ಬಂಧಿತ ಡ್ರಗ್ ಫೆಡ್ಲರ್​ ಗಳು. ಬಂಧಿತರಿಂದ ಸುಮಾರು 7 ಕೋಟಿ ಮೌಲ್ಯದ ಡ್ರಗ್ಸ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 1.85 ಕೆ.ಜಿ ಬಿಳಿ ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್ , 1.15kg ಕಂದು ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ್, 310 ಗ್ರಾಂ ಕೊಕೇನ್ ಅನ್ನು ಜಫ್ತಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಾಫ್ಟ್‌ವೇರ್ ಇಂಜನಿಯರ್ ಗಳನ್ನ ಟಾರ್ಗೆಟ್ ಮಾಡುತ್ತಿದ್ದ ವಿದೇಶಿ ಡ್ರಗ್ ಫೆಡ್ಲರ್ ​ಗಳು, ದೊಡ್ಡ ದೊಡ್ಡ ಉದ್ಯಮಿಗಳಿಗೂ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ನಗರದಲ್ಲಿ ಸುಮಾರು ಐದು ವರ್ಷಗಳಿಂದ ಮಾರಾಟ ಮಾಡುತ್ತಿದ್ದ ಫೆಡ್ಲರ್ಸ್ ​ಗಳು ಇದುವರೆಗೂ ನಗರದಲ್ಲಿ ಕೋಟ್ಯಾಂತರ ರೂಪಾಯಿ ಡ್ರಗ್ಸ್ ಮಾರಾಟ ಮಾಡಿದ್ದಾರೆ. ಸದ್ಯ ಇಬ್ಬರು ಫೆಡ್ಲರ್​ಗಳ ಮೊಬೈಲ್​ನ್ನು ವಶಕ್ಕೆ ಪಡೆದಿದ್ದು ಈ ಕುರಿತು ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : 7 - – - - - - .