ಅಮುಲ್ ಅಂದ್ರೆ ಬಿಜೆಪಿ ನಂದಿನಿ ಅಂದ್ರೆ ಕಾಂಗ್ರೆಸ್ಸಾ..? ಕಾಮಾಲೆ ಕಣ್ಣಿನಿಂದ ನೋಡೋದನ್ನ ಬಿಡಿ-ಸಚಿವ ಸುಧಾಕರ್ ವಾಗ್ದಾಳಿ. ಬೆಂಗಳೂರು,ಏಪ್ರಿಲ್,8,2023(..):ರಾಜ್ಯದ ಕನ್ನಡಿಗರ ಜೀವಾಳ ನಂದಿನಿ ಹಾಲಿನ ಬ್ರ್ಯಾಂಡ್ ತುಳಿಯಲು ಅಮುಲ್ ಮೂಲಕ ಸಂಚು ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಸುಧಾಕರ್, ಅಮುಲ್ ಅಂದ್ರೆ ಬಿಜೆಪಿ, ನಂದಿನಿ ಅಂದ್ರೆ ಕಾಂಗ್ರೆಸ್ಸಾ..? ಕಾಂಗ್ರೆಸ್ಸಿಗರು ಅಪಹಾಸ್ಯಕ್ಕೆ ಒಳಗಾಗಬೇಡಿ. ಕಾಮಾಲೆ ಕಣ್ಣಿನಿಂದ ನೋಡದನ್ನ ಬಿಡಿ ಎಂದು ಟಾಂಗ್ ನೀಡಿದ್ದಾರೆ. ನಂದಿನಿ ಹಾಲನ್ನ ರಾಜ್ಯಕ್ಕೆ ಸೀಮಿತ ಮಾಡಬೇಡಿ ನಂದಿನಿ ಹಾಲನ್ನ ಬೇರೆ ರಾಜ್ಯಗಳಿಗೂ ಕಳಿಸುತ್ತಿದ್ದೇವೆ. ಸೇನೆ, ತಿರುಪತಿ, ದೆಹಲಿಗೂ ಕಳಿಸುತ್ತಿದ್ದೇವೆ. ಬೇರೆ ಬ್ರ್ಯಾಂಡ್ ಹಾಲನ್ನೂ ಇಲ್ಲಿ ಮಾರಲಾಗುತ್ತಿದೆ ಎಂದು ಸಚಿವ ಸುಧಾಕರ್ ತಿಳಿಸಿದರು. : – - – – -