ಬಿಜೆಪಿ ಎಂಎಲ್ ಸಿ ಅಯನೂರು ಮಂಜುನಾಥ್ ರಾಜೀನಾಮೆ: ಕೆ.ಎಸ್ ಈಶ್ವರಪ್ಪ ವಿರುದ್ಧ ಬಂಡಾಯ ಸ್ಪರ್ಧೆಗೆ ನಿರ್ಧಾರ. ಶಿವಮೊಗ್ಗ,ಏಪ್ರಿಲ್,3,2023(..):ಶಿವಮೊಗ್ಗದಲ್ಲಿ ಬಿಜೆಪಿಗೆ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಶಾಕ್ ನೀಡಿದ್ದಾರೆ. ವಿಧಾನಪರಿಷತ್ ಸ್ಥಾನಕ್ಕೆ ಎಂಎಲ್ ಸಿ ಆಯನೂರು ಮಂಜುನಾಥ್ ರಾಜೀನಾಮೆ ನೀಡಿದ್ದಾರೆ. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಯನೂರು ಮಂಜುನಾಥ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಆಯನೂರು ಮಂಜುನಾಥ್, ನಾನು ರಾಜೀನಾಮೆ ಕೊಟ್ಟು ಕೆ.ಎಸ್ ಈಶ್ವರಪ್ಪ ವಿರುದ್ಧ ಬಂಡಾಯವಾಗಿ ಸ್ಪರ್ಧೆ ಮಾಡುತ್ತೇನೆ. ನಾನು ನಾನು ಮಾಜಿ ಸಚಿವ ಈಶ್ವರಪ್ಪ ಸವಾಲನ್ನ ಸ್ವೀಕಾರ ಮಾಡುತ್ತೇನೆ. ಕೆಎಸ್ ಈಶ್ವರಪ್ಪ ಸಮರ್ಥರಿದ್ದರೇ ನನ್ನನ್ನ ಎದುರಿಸಲಿ ಎಂದು ಸವಾಲು ಹಾಕಿದ್ದಾರೆ. ಶಿವಮೊಗ್ಗದಲ್ಲಿ ಮೊನ್ನೆ ನಾಲ್ಕುವರೆ ಕೋಟಿ ಮೌಲ್ಯದ ಸೀರೆಗಳು ಸಿಕ್ಕಿವೆ. ಸೀರೆಗಳ ಮಾಲೀಕರು ಯಾರು ಎಂದು ಗೊತ್ತಾಗಿಲ್ಲ ಈಶ್ವರಪ್ಪರಿಂದ ಅಭಿವೃದ್ದಿಯಾಗಿಲ್ಲ ಪ್ರಚೋದನೆಯೇ ಅವರ ಬಂಡವಾಳವಾಗಿದೆ ಎಂದು ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ. : - –-- - -