ಹಾಸನ ಟಿಕೆಟ್ ಬಗ್ಗೆ ಹೆಚ್.ಡಿ ದೇವೇಗೌಡರ ನಿರ್ಧಾರ ಅಂತಿಮ-ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ಬೆಂಗಳೂರು,ಏಪ್ರಿಲ್,3,2023(..):ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಜೆಡಿಎಸ್ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಇಂದು 2ನೇ ಪಟ್ಟಿ ರಿಲೀಸ್ ಆಗುವ ಸಾಧ್ಯತೆ ಇದೆ. ಆದರೆ ಹಾಸನ ಟಿಕೆಟ್ ಕುರಿತ ಗೊಂದಲ ಮುಂದುವರೆದಿದೆ. ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಹಾಸನದ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಹಾಸನ ವಿಚಾರದಲ್ಲಿ ನನ್ನ ನಿಲುವು ಹೇಳಿದ್ದೇನೆ. ಹೆಚ್.ಡಿ ದೇವೇಗೌಡರು ಅನುಭವದ ಮಾತು ಹೇಳಿದ್ದಾರೆ. ಟಿಕೆಟ್ ಬಗ್ಗೆ ಹೆಚ್.ಡಿ ದೇವೇಗೌಡರ ನಿರ್ಧಾರ ಅಂತಿಮವಾಗಲಿದೆ ಎಂದರು. ಹಾಗೆಯೇ ಮಧ್ಯಾಹ್ನ ಜೆಡಿಎಸ್ ಪಟ್ಟಿ ಬಗ್ಗೆ ಮಾತನಾಡುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. : - – -- - - .