ದುರ್ಗಾಷ್ಟಮಿ ಪುಣ್ಯ ದಿನದಂದು ಎಲೆಕ್ಷನ್ ಘೋಷಣೆ: ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ- ರಣದೀಪ್ ಸಿಂಗ್ ಸುರ್ಜೇವಾಲ. ಬೆಂಗಳೂರು,ಮಾರ್ಚ್,29,2023(..):ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು ಈ ಬೆನ್ನಲ್ಲೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ದುರ್ಗಾಷ್ಟಮಿ ಪುಣ್ಯ ದಿನದಂದು ಎಲೆಕ್ಷನ್ ಘೋಷಣೆಯಾಗಿದೆ ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಸಿಂಗ್ ಸುರ್ಜೆವಾಲ, ದುರ್ಗಾಷ್ಟಮಿಯ ಪುಣ್ಯ ದಿನದಂದು ಕರ್ನಾಟಕ ಚುನಾವಣೆಯನ್ನು ಘೋಷಿಸಿದೆ. 40 ಪರ್ಸೆಂಟ್ ಸರ್ಕಾರ ಮತ್ತು ಅದರ ಲಜ್ಜೆಗೆಟ್ಟ ಲೂಟಿಯಿಂದ ರಾಜ್ಯವನ್ನು ಮುಕ್ತಗೊಳಿಸಲು ಕಾಂಗ್ರೆಸ್ ಸಂಕಲ್ಪ ಮಾಡಿದೆ. # ಪುನರ್ ನಿರ್ಮಾಣ ಮಾಡೋಣ. ಕನ್ನಡಿಗರ ಅಭಿಮಾನ ಬೆಳೆಯಲಿ. ಕಾಂಗ್ರೆಸ್‌ ಭರವಸೆಗಳನ್ನು ಜಾರಿಗೆ ತರೋಣ. ಕರ್ನಾಟಕ ಗೆಲ್ಲಲಿ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. : - - -- .