ಬಿಎಸ್ ವೈ ಕೇಸ್ ಹಾಕಬೇಡಿ ಎಂದಿದ್ದಾರೆ: ಆದ್ರೂ ಶಿಕಾರಿಪುರ ಘಟನೆ ಕುರಿತು ತನಿಖೆ ಮಾಡುತ್ತೇವೆ- ಗೃಹಸಚಿವ ಅರಗ ಜ್ಞಾನೇಂದ್ರ. ಶಿವಮೊಗ್ಗ,ಮಾರ್ಚ್,28,2023(..):ಒಳಮೀಸಲಾತಿಗೆ ವಿರೋಧಿಸಿ ನಿನ್ನೆ ಶಿಕಾರಿಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. ಘಟನೆ ಸಂಬಂಧ ಬಿಎಸ್ ಯಡಿಯೂರಪ್ಪ ಕೇಸ್ ಹಾಕಬೇಡಿ ಎಂದಿದ್ದಾರೆ. ಆದರೆ ಕೆಲ ಪೊಲೀಸರಿಗೆ ಕಲ್ಲು ತೂರಾಟದಿಂದ ಗಾಯಗಳಾಗಿದೆ. ಹೀಗಾಗಿ ಘಟನೆ ಕುರಿತು ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ನಿನ್ನೆ ನಡೆದ ಘಟನೆ ಸಂಬಂಧ ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ಶಿಕಾರಿಪುರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ಬಿಎಸ್ ವೈ ಕೇಸ್ ಹಾಕಬೇಡಿ ಎಂದಿದ್ದಾರೆ. ಆದರೆ ಕಲ್ಲು ತೂರಾಟ ವೇಳೇ ಕೆಲವು ಪೊಲೀಸರಿಗೆ ಗಾಯವಾಗಿದೆ. ಈ ಗಲಾಟೆಯಲ್ಲಿ ಕೆಲವರು ಕ್ರಿಮಿನಲ್ ಹಿನ್ನಲೆಯುಳ್ಳವರು ಇದ್ದಾರೆ. ಶಿಕಾರಿಪುರ ಘಟನೆ ಕುರಿತು ತನಿಖೆ ಮಾಡುತ್ತೇವೆ ಎಂದರು. : - – - - - .