ಇಡೀ ರಾತ್ರಿ ಮೊಬೈಲ್ ಚಾರ್ಜ್ ಹಾಕುವವರೇ ಎಚ್ಚರ: ಶಾರ್ಟ್ ಸರ್ಕ್ಯೂಟ್ ನಿಂದ ಅಂಗಡಿಯೊಂದು ಸುಟ್ಟು ಭಸ್ಮ. ಬೆಂಗಳೂರು,ಮಾರ್ಚ್,28,2023(..):ಇಡೀ ರಾತ್ರಿ ಮೊಬೈಲ್​ ಚಾರ್ಜ್ ಗೆ ಇಟ್ಟು ಮಲಗುವವರೇ ಎಚ್ಚರ. ಯಾಕೆಂದರೆ ಇಡೀರಾತ್ರಿ ಚಾರ್ಜ್ ಗಿಟ್ಟಿದ್ದ ಮೊಬೈಲ್ ನಿಂದಾಗಿ ಶಾರ್ಟ್ ಸರ್ಕ್ಯೂಟ್ ಆಗಿ ಮೊಬೈಲ್ ಅಂಗಡಿ ಸುಟ್ಟು ಭಸ್ಮವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ವಿಜಯನಗರದಲ್ಲಿ ಈ ಘಟನೆ ನಡೆದಿದೆ. ಅಂಗಡಿ ಮಾಲೀಕ ರಾತ್ರಿ ಮೊಬೈಲ್​ ಚಾರ್ಜ್​​ ಇಟ್ಟು ಮನೆಗೆ ಹೋಗಿದ್ದರು. ಇಂದು ಬೆಳಗ್ಗೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಮಾಲೀಕನಿಗೆ ಶಾಕ್ ಆಗಿದೆ. ಶಾರ್ಟ್ ​ಸರ್ಕ್ಯೂಟ್​ನಿಂದ ಮೊಬೈಲ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಅಂಗಡಿ ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. : – – - - -