ನೋವಿನಿಂದ ಜೆಡಿಎಸ್ ಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ- ಶಾಸಕ ಎಸ್.ಆರ್ ಶ್ರೀನಿವಾಸ್. ತುಮಕೂರು,ಮಾರ್ಚ್,27,2023(..): ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಶುರುವಾಗಿದ್ದು ಈ ನಡುವೆ ತುಮಕೂರು ಜಿಲ್ಲೆ ಗುಬ್ಬಿಕ್ಷೇತ್ರದ ಶಾಸಕ ಎಸ್.ಆರ್ ಶ್ರೀನಿವಾಸ್ ಜೆಡಿಎಸ್ ಗೆ ಗುಡ್ ಬೈ ಹೇಳುತ್ತಿದ್ದಾರೆ. ಈ ಕುರಿತು ಇಂದು ತುಮಕೂರಿನಲ್ಲಿ ಮಾತನಾಡಿರುವ ಶಾಸಕ ಎಸ್.ಆರ್ ಶ್ರೀನಿವಾಸ್, ನಾನು ನೋವಿನಿಂದ ಜೆಡಿಎಸ್ ಗೆ ರಾಜೀನಾಮೆ ಸಲ್ಲಿಕೆ ಮಾಡುತ್ತಿದ್ದೇನೆ. ತುಮಕೂರಿನಲ್ಲಿ ಹೆಚ್.ಡಿ ದೇವೇಗೌಡರನ್ನ ಸೋಲಿಸಿಲ್ಲ. ನಾನು ಪಕ್ಷ ಬಿಡಲ್ಲ ಅಂದರೂ ಅಭ್ಯರ್ಥಿ ಘೋಷಿಸಿದ್ರು . ಹೆಚ್.ಡಿ ಕುಮಾರಸ್ವಾಮಿ ನನ್ನ ತಮ್ಮನ ರೀತಿ ಸಹಕಾರ ಕೊಟ್ಟಿದ್ದಾರೆ ಎಂದಿದ್ದಾರೆ. ಇನ್ನು ಸುಮಾರು ಎರಡು ದಶಕಗಳ ಕಾಲ ಪಕ್ಷಕ್ಕಾಗಿ ದುಡಿಯುವ ಅವಕಾಶ ನೀಡಿದ್ದಕ್ಕಾಗಿ ಪಕ್ಷದ ವರಿಷ್ಠ ಹೆಚ್ ಡಿ ದೇವೇಗೌಡರನ್ನು ಎಸ್.ಆರ್ ಶ್ರೀನಿವಾಸ್ ಕೃತಜ್ಞತೆಯಿಂದ ನೆನೆದರು. : – – - -