ಹಾಸನ ಜಿಲ್ಲೆಯ 7 ಕ್ಷೇತ್ರದಲ್ಲೂ ನಾವೇ ಗೆಲ್ಲುತ್ತೇವೆ- ಮಾಜಿ ಸಚಿವ ಹೆಚ್.ಡಿ ರೇವಣ್ಣ. ಹಾಸನ,ಮಾರ್ಚ್,21,2023(..):ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ 7ಕ್ಕೆ 7 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಹಾಸನದಲ್ಲಿ ಇಂದು ಮಾತನಾಡಿದ ಹೆಚ್.ಡಿ ರೇವಣ್ಣ, ದೇವೇಗೌಡರೇ ಹಾಸನ ಟಿಕೆಟ್ ಫೈನಲ್ ಮಾಡ್ತಾರೆ. ಹಾಸನ ಜಿಲ್ಲೆಯ 7 ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ. ಜಿಲ್ಲೆಯ 7 ಕ್ಷೇತ್ರಗಳಿಗೂ ಹೆಚ್.ಡಿ ದೇವೇಗೌಡರು ಟಿಕೆಟ್ ಫೈನಲ್ ಮಾಡುತ್ತಾರೆ. ಹೇಗೆ ಮ್ಯಾಜಿಕ್ ಮಾಡಬೇಕೆಂದು ನಮಗೆ ಗೊತ್ತಿದೆ ಎಂದರು. ಹಾಸನ ಜೆಡಿಎಸ್ ಟಿಕೆಟ್ ಗೆ ರಾಜೇಗೌಡ ಬೇಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ರೇವಣ್ಣ ಟಿಕೆಟ್ ಕೋಡುವುದಾಗಿ ಈ ಹಿಂದೆ ಮಾತು ಕೊಟ್ಟಿದ್ವಿ. ಅದ್ದರಿಂದ ರಾಜೇಗೌಡ ಟಿಕೆಟ್ ಕೇಳಿದ್ದಾರೆ. ಯಾರಿಗೆ ಟಿಕೆಟ್ ನೀಡಬೇಕೆಂದು ಪಕ್ಷ ತೀರ್ಮಾನಿಸಲಿದೆ ಎಂದರು. : – – 7 – – - .