ಲಂಚ ಸ್ವೀಕರಿಸುವ ವೇಳೆ ಪಿಎಸ್ ಐ ಮತ್ತು ಕಾರು ಚಾಲಕ ಲೋಕಾಯುಕ್ತ ಬಲೆಗೆ ಹಾವೇರಿ,ಮಾರ್ಚ್,21,2023(..):ಲಂಚ ಪಡೆಯುವಾಗ ಪಿಎಸ್ ಐ ಮತ್ತು ಕಾರು ಚಾಲಕ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ ಶಹರ ಪೊಲೀಸ್ ಠಾಣೆಯ ಪಿಎಸ್ ಐ ಸುನೀಲ್ ತೇಲಿ ಹಾಗೂ ಕಾರು ಚಾಲಕ ಸಚಿನ್ ಲೋಕಾಯುಕ್ತ ಬಲೆಗೆ ಬಿದ್ದವರು. ಫಿರೋಜ್ ಎಂಬುವವರಿಗೆ ಮನೆ ಬಾಡಿಗೆ ವಸೂಲಿ ಮಾಡಿಕೊಡಲು ಪಿಎಸ್ ಐ ಸುನೀಲ್ ತೇಲಿ 50 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ನಡುವೆ ಫಿರೋಜ್ ರಿಂದ 40 ಸಾವಿರ ಲಂಚ ಪಡೆಯುವಾಗ ಪಿಎಸ್ ಐ ಸುನೀಲ್ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ. ಇದೀಗ ಪಿಎಸ್ ಐ ಸುನೀಲ್ ಕಾರು ಚಾಲಕ ಸಚಿನ್ ಇಬ್ಬರನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. : – - – - -