ಬಾಬೂರಾವ್ ಚಿಂಚನಸೂರ್ ಗೆ ಅಧಿಕಾರದ ಮೇಲೆ ಆಸೆ: ಅವರ ಮಾತಿಗೆ ಯಾವುದೇ ಬೆಲೆ ಇಲ್ಲ- ಸಚಿವ ಆರ್.ಅಶೋಕ್ ಕಿಡಿ. ಬೆಂಗಳೂರು,ಮಾರ್ಚ್,21,2023(..):ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಲು ಮುಂದಾಗಿರುವ ಬಾಬೂರಾವ್ ಚಿಂಚನಸೂರ್ ಅವರ ವಿರುದ್ದ ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿದ ಆರ್.ಅಶೋಕ್, ಚಿಂಚನಸೂರ್ ಗೆ ಅಧಿಕಾರದ ಮೇಲೆ ಆಸೆ. ಚಿಂಚನಸೂರ್ ಮಾತಿಗೆ ಯಾವುದೇ ಬೆಲೆ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಬಿಜೆಪಿಗೆ ಬಂದಿದ್ದಾಗೆ ಹೇಳಿದ್ರು. ಎಂಎಲ್ ಸಿ ಆದರೂ ವಿಧಾನಸಭೆ ಟಿಕೆಟ್ ಕೇಳುತ್ತಿದ್ದಾರೆ. ಚಿಂಚನಸೂರ್ ಮಾತಿನ ಮೇಲೆ ನಿಲ್ಲಲ್ಲ ಎಂದು ವಾಗ್ದಾಳಿ ನಡೆಸಿದರು. ಚಾಮರಾಜನಗರದಿಂದ ಸಚಿವ ವಿ.ಸೋಮಣ್ಣ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ನಿನ್ನೆ ಸಂಜೆ ಸೋಮಣ್ಣ ಕರೆ ಮಾಡಿದ್ರು.ನಿಮ್ಮ ಜೊತೆ ಮಾತಾಡಬೇಕಂದರು ಚಾಮರಾಜನಗರಿಂದ ಸೋಮಣ್ಣ ಸ್ಪರ್ಧಿಸುವುದಾಗಿ ಹೇಳಿದರು. ಸೋಮಣ್ಣ ಬಿಜೆಪಿಯಲ್ಲಂದಲೇ ಸ್ಪರ್ಧಿಸುತ್ತಾರೆ ಎಂದರು. : - – - -.