ಉರಿಗೌಡ, ನಂಜೇಗೌಡ ಸಿನಿಮಾ ವಿಚಾರ: ಬಿಜೆಪಿಯವರು ಇತಿಹಾಸ ಬದಲಾಯಿಸಲು ಹೊರಟಿದ್ದಾರೆ- ಡಿ.ಕೆ ಶಿವಕುಮಾರ್. ಬೆಳಗಾವಿ,ಮಾರ್ಚ್,20,2023(..):ಉರಿಗೌಡ, ನಂಜೇಗೌಡ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಬಿಜೆಪಿಯವರು ಇತಿಹಾಸ ಬದಲಾವಣೆ ಮಾಡಲು ಹೊರಟಿದ್ದಾರೆ. ಇತಿಹಾಸವನ್ನ ತಿರುಚಿದ್ದಾರೆ. ವಾಟ್ಸಪ್ ಯುನಿವರ್ಸಿಟಿ ಮೂಲಕ ಹೊಸ ಇತಿಹಾಸ ಬರೆಯಲು ಯತ್ನಿಸಿದ್ದಾರೆ. ಒಕ್ಕಲಿಗರಿಗೆ ಅಗೌರವ ತೋರುವ ಕೆಲಸ ಮಾಡುತ್ತಿದ್ದಾರೆ. ಉರಿಗೌಡ ದೊಡ್ಡ ನಂಜೇಗೌಡರ ಹೆಸರನ್ನ ಎಲ್ಲಿ ಕೇಳಿದ್ದೇವೆ. ಕೂಡಲೇ ಈ ಬಗ್ಗೆ ಪ್ರಸ್ತಾಪಿಸಿದವರ ವಿರುದ್ದ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು. ಶೋಭಾ ಕರಂಧ್ಲಾಜೆ, ಸಿಟಿ ರವಿ ಒಕ್ಕಲಿಗ ಸಮುದಾಯದ ವಿರೋಧಿಗಳು. ಸಿಎಂ ಬಸವರಾಜ ಬೊಮ್ಮಾಯಿ ನಮ್ಮ ಗ್ಯಾರಂಟಿ ಬಗ್ಗೆ ಟೀಕೆ ಮಾಡುತ್ತಾರೆ. ನಮ್ಮ ಗ್ಯಾರಂಟಿ ಬಗ್ಗೆ ಸಿಎಂ ಟೀಕೆ ಮಾಡಲಿ ಪರವಾಗಿಲ್ಲ. ಬಿಜೆಪಿಯವರು ನಮ್ಮನ್ನ ಫಾಲೋ ಮಾಡುತ್ತಿದ್ದಾರೆ ಎಂದರು. : - - – - .