ರಾಮನಗರ ಕ್ಷೇತ್ರದಿಂದ ಡಿ.ಕೆ ಸುರೇಶ್ ಸ್ಪರ್ಧೆ ಬಗ್ಗೆ ಪ್ರಸ್ತಾಪವಿದೆ: ತೀರ್ಮಾನಿಸಿಲ್ಲ- ಡಿ.ಕೆ ಶಿವಕುಮಾರ್. ಬೆಂಗಳೂರು,ಮಾರ್ಚ್,14,2023(..): ರಾಮನಗರ ಕ್ಷೇತ್ರದಿಂದ ಡಿ.ಕೆ ಸುರೇಶ್ ಸ್ಪರ್ಧೆ ಬಗ್ಗೆ ಪ್ರಸ್ತಾಪವಿದೆ. ಆದರೆ ನಾವು ಯಾವುದೇ ತೀರ್ಮಾನಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಡಿಕೆ ಸುರೇಶ್ ಸ್ಪರ್ಧೆ ಬಗ್ಎಗ ಹೈಕಮಂಡ್ ನಿಂದ ಒತ್ತಡ ಬಂದಿದ್ದು ನಿಜ. ಪಾರ್ಟಿ ಹೇಳುತ್ತಿದೆ. ಆದರೆ ನಾವಿನ್ನೂ ತೀರ್ಮಾನ ಮಾಡಿಲ್ಲ ಎಂದರು. ಈ ಹಿಂದೆಯೂ ಡಿಕೆ ಸುರೇಶ್ ಸ್ಪರ್ಧೆಗೆ ಕಾರ್ಯಕರ್ತರು ಒತ್ತಾಯ ಮಾಡಿದ್ದರು. ಆದರೆ ಮತ್ತೆ ಬೈಎಲೆಕ್ಷನ್ ಎಲ್ಲಾ ಮಾಡುವುದಕ್ಕೆ ಇಷ್ಟಿವಿಲ್ಲ. ಸ್ಪರ್ಧೆಗೆ ಡಿಕೆ ಸುರೇಶ್ ಅರ್ಜಿ ಹಾಕಿಲ್ಲ. ಚರ್ಚೆಯೂ ಮಾಡಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು. : - - - - – .