ನಿಮ್ಹಾನ್ಸ್ ಅಭ್ಯರ್ಥಿಗಳ ಬಗ್ಗೆ ನಾನು ಮಾತನಾಡಲ್ಲ-ರಮೇಶ್ ಜಾರಕಿಹೊಳಿಗೆ ಡಿ.ಕೆ ಶಿವಕುಮಾರ್ ಟಾಂಗ್. ಬೆಂಗಳೂರು,ಮಾರ್ಚ್,13,2023(..):ಕಾಂಗ್ರೆಸ್ ಗೆ ಬರುವಂತೆ ಮಂತ್ರಿಯೊಬ್ಬರಿಗೆ ಡಿ.ಕೆ ಶಿವಕುಮಾರ್ ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ. ಮಾಧ್ಯಮಗಳ ಜೊತೆ ಈ ಕುರಿತು ಮಾತಾಡಿದ ಡಿ.ಕೆ ಶಿವಕುಮಾರ್, ಮಾನಸಿಕ ಅಸ್ವಸ್ಥರು, ನಿಮ್ಹಾನ್ಸ್ ನಲ್ಲಿ ಭರ್ತಿಯಾಗಲು ಅರ್ಹರಾಗಿರುವ ವ್ಯಕ್ತಿಗಳ ಬಗ್ಗೆ ಕಾಮೆಂಟ್ ಮಾಡುವುದಿಲ್ಲ. ನಿಮ್ಹಾನ್ಸ್ ಅಭ್ಯರ್ಥಿಗಳ ಬಗ್ಗೆ ನಾನು ಮಾತನಾಡಲ್ಲ ಎಂದು ಲೇವಡಿ ಮಾಡಿದರು. ರೌಡಿಶೀಟರ್ ಮುಂದೆ ಪ್ರಧಾನಿ ಮೋದಿ ಕೈಮುಗಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಪ್ರಧಾನಿ ಮೋದಿ ಯಾರಿಗಾದ್ರೂ ಕೈ ಮುಗಿಯಲಿ, ರೌಡಿಶೀಟರ್, ರೇಪಿಸ್ಟ್ ನಾದ್ರೂ ಸೇರಿಸಿಕೊಳ್ಳಲಿ. ಅವರು ಅವರ ಮುತ್ತುರತ್ನಗಳನ್ನ ಚೆನ್ನಾಗಿ ನೋಡಿಕೊಳ್ಳಲಿ ಎಂದು ಬಿಜೆಪಿ ಕಾಲೆಳೆದರು. : - - - - -- –