‘ದಿ ಎಲಿಫಂಟ್ ವಿಸ್ಪರರ್ಸ್​’ ಡಾಕ್ಯುಮೆಂಟರಿ ಹಾಗೂ ಆರ್ ಆರ್ ಆರ್ ಚಿತ್ರದ ‘ನಾಟು ನಾಟು’ ಹಾಡಿಗೆ ಒಲಿದ ಆಸ್ಕರ್ ಪ್ರಶಸ್ತಿ. ನವದೆಹಲಿ,ಮಾರ್ಚ್,13,2023(..):ದಿ ಎಲಿಫಂಟ್ ವಿಸ್ಪರರ್ಸ್​’ ಡಾಕ್ಯುಮೆಂಟರಿ ಹಾಗೂ‘ಆರ್ ಆರ್ ಆರ್ ಚಿತ್ರದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಪ್ರಶಸ್ತಿ ಒಲಿದಿದೆ. ಭಾರತಕ್ಕೆ ಈ ಬಾರಿ ಎರಡು ಆಸ್ಕರ್​ ಅವಾರ್ಡ್ ಬಂದಿದ್ದು, ‘ದಿ ಎಲಿಫಂಟ್ ವಿಸ್ಪರರ್ಸ್​’ ಡಾಕ್ಯುಮೆಂಟರಿ ಹಾಗೂ ​ಆರ್ ಆರ್ ಆರ್ ಚಿತ್ರದ ‘ನಾಟು ನಾಟು..’ ಹಾಡು ಪ್ರಶಸ್ತಿ ಗೆದ್ದಿವೆ. ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ‘ಅತ್ಯುತ್ತಮ ಒರಿಜಿನಲ್ ಸಾಂಗ್​’ ವಿಭಾಗದಲ್ಲಿ ಆಸ್ಕರ್ ಅವಾರ್ಡ್ ಪಡೆದಿದೆ. ಇನ್ನು, ‘ದಿ ಎಲಿಫಂಟ್ ವಿಸ್ಪರರ್ಸ್​’ಗೆ ಬೆಸ್ಟ್​ ಡಾಕ್ಯುಮೆಂಟರಿ ಶಾರ್ಟ್​ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ನಮ್ಮ ದೇಶಕ್ಕೆ ಈ ಬಾರಿ ಎರಡು ಆಸ್ಕರ್ ಅವಾರ್ಡ್​ ಸಿಕ್ಕಿದೆ. : - – - - - .