ನೂರಕ್ಕೆ ನೂರು ಭ್ರಷ್ಟಾಚಾರ ಮುಕ್ತ ಅಂದರೇ ಇದೇನಾ..? –ಸಿಎಂ ಬೊಮ್ಮಾಯಿ ವಿರುದ್ದ ಹೆಚ್.ಡಿಕೆ ಕಿಡಿ. ಬೆಂಗಳೂರು,ಮಾರ್ಚ್,3,2023(..):ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ದಾಳಿ ವೇಳೆ ಸುಮಾರು 8 ಕೋಟಿ ರೂ. ಹಣ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯನ್ನ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತರಾಟೆ ತೆಗೆದುಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಭ್ರಷ್ಟಾಚಾರ ಮುಕ್ತ ಮಾಡ್ತೇವೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದೇವೆ ಎಂದು ಅಮಿತ್ ಶಾ ಹೇಳಿದ್ದರು. ಆದರೆ ಬಿಜೆಪಿ ಶಾಸಕರ ಮಗನ ಬಳಿ 7 ಕೋಟಿರೂ. ಪತ್ತೆಯಾಗಿದೆ. ಇದಪ್ಪ ವರಸೆ ಎಂದರೇ ಅಲ್ಲವೇ ಬೊಮ್ಮಾಯಿ ಅವರೇ. ನೂರಕ್ಕೆ ನೂರು ಭ್ರಷ್ಟಾಚಾರ ಮುಕ್ತ ಅಂದರೇ ಇದೇನಾ..? ಎಂದು ಕಿಡಿಕಾರಿದ್ದಾರೆ. : 100% –- - - .